ತಮಿಳುನಾಡಿಗೆ ಕಾವೇರಿ ನೀರು-ಹೊನ್ನುಡಿಕೆ ಪಟ್ಟಣ ಬಂದ್

tumakuru

ತುಮಕೂರು,ಸೆ.14-ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಹೊನ್ನುಡಿಕೆ ಪಟ್ಟಣ ಬಂದ್ ಮಾಡಿ ಸುತ್ತಮುತ್ತಲ ಗ್ರಾಮಸ್ಥರು ಹಾಗು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಬಂದ್ ಹಿನ್ನಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಪಟ್ಟಣದ ಆಸ್ಪತ್ರೆ ವೃತ್ತದಲ್ಲಿ ಟೈರ್‍ಗೆ ಬೆಂಕಿ ಇಟ್ಟು ರಸ್ತೆ ತಡೆ ನಡೆಸಲಾಯಿತು.ಇದರಿಂದಾಗಿ ತುಮಕೂರು ಮಾಗಡಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಹೊನ್ನುಡಿಕೆ ಭಾಗದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ತಮಿಳುನಾಡು ಸಿಎಂ ಜಯಲಲಿತಾ ಹಾಗು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕಾವೇರಿ ಕೊಳ್ಳದ ಒಂದು ಭಾಗವಾಗಿರುವ ಹೇಮಾವತಿ ನೀರು ತುಮಕೂರು ಜಿಲ್ಲೆಯ ಜೀವನಾಡಿ. ಈ ನೀರನ್ನ ಕೆಆರ್‍ಎಸ್ ಮೂಲಕ ತಮಿಳುನಾಡಿಗೆ ಹರಿಸುವುದರಿಂದ ಜಿಲ್ಲೆಯಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಈ ವೇಳೆಗಾಗಲೇ ಜಿಲ್ಲೆಯ ಕೆರೆಕಟ್ಟೆಗಳಿಗೆ ಹೇಮಾವತಿ ನೀರು ಹರಿಯಬೇಕಿತ್ತು. ತಮಿಳುನಾಡಿಗೆ ಬಿಟ್ಟಿರುವುದರಿಂದ ನಮ್ಮ ಕೆರೆಗಳಿಗೆ ನೀರು ಬಂದಿಲ್ಲ. ಹೀಗಾಗಿ ಸಿಎಂ ಸಿದ್ಧರಾಮಯ್ಯ ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನ ತಡೆದು ರಾಜ್ಯದ ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಬಳಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ಮುಖಂಡರಾದಡಾ.ಕುಮಾರ್,ರಾಮಚಂದ್ರಪ್ಪ,ಗ್ರಾಮಪಂಚಾಯ್ತಿ ಅಧ್ಯಕ್ಷ ಮೋಹನ್, ತಾ.ಪಂ.ಸದಸ್ಯ ಗೋವಿಂದರಾಜು, ಬಿಜೆಪಿ ಮುಖಂಡರಾದ ಸಿದ್ದೇಗೌಡ,ಲೋಕೇಶ್, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.(ಫೋಟೋ ಇದೆ.14ಟಿಯುಎಂ2)

► Follow us on –  Facebook / Twitter  / Google+

 

Sri Raghav

Admin