ತಮಿಳುನಾಡಿಗೆ ಕಾವೇರಿ ನೀರು : ಕಬ್ಬು ಬೆಳೆಗಾರರ ಪ್ರತಿಭಟನೆ

t--narasipura

ಟಿ.ನರಸೀಪುರ, ಸೆ.- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮೈಸೂರು-ಚಾಮರಾಜನಗರ ಮುಖ್ಯರಸ್ತೆಯ ನೂತನ ಕಪಿಲಾ ಸೇತುವೆ ಬಳಿ ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.  ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕಿರಗಸೂರು ಶಂಕರ್, ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಬಿತ್ತನೆ ಮಾಡಿರುವ ಫಸಲುಗಳಿಗೆ ನೀರಿಲ್ಲದೆ ಒಣಗುತ್ತಿರುವ ಸಂದರ್ಭದಲ್ಲಿ ಈ ಭಾಗದ ರೈತರ ಬೆಳೆಗಳಿಗೆ ಸಕಾಲದಲ್ಲಿ ನೀರು ನೀಡಿ ರೈತರನ್ನು ಹಿತ ಕಾಪಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೇರ ರಾಜ್ಯ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯದ ರೈತರ ಹಿತವನ್ನು ಮರೆತಿದೆ ಎಂದು ದೂರಿದರು.

ಸರ್ಕಾರ ನೀರನ್ನು ಒದಗಿಸಿಕೊಡುತ್ತದೆ ಎಂಬ ಆಶಾಬಾವನೆಯೊಂದಿಗೆ ಈಗಾಗಲೇ ಸಾಕಷ್ಟು ರೈತರು ಭತ್ತದ ನಾಟಿ ಮಾಡಿದ್ದು, ಕಳೆದ ಆ.30 ರಂದು ಧೀಡಿರ್ ಎಂದು ಸರ್ಕಾರ ನಾಲೆಗಳಿಗೆ ನೀರು ಹರಿಸದೇ ನಿಲ್ಲಿಸಿರುವ ಪರಿಣಾಮ ಈ ಭಾಗದ ರೈತರು ಕಂಗಲಾಗಿದ್ದಾರೆ.  ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ತಮಿಳುನಾಡಿಗೆ ದಿನನಿತ್ಯ ಹರಿಸುತ್ತಿರುವ 1 ಟಿಎಂಸಿ ನೀರನ್ನು ನಿಲ್ಲಿಸಿ, ನಾಲೆಗಳಿಗೆ ನೀರು ಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ರೈತರೊಡನೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕುರುಬೂರು ಸಿದ್ದೇಶ್, ಬೆನಕನಹಳ್ಳಿ ಪರಶಿಮೂರ್ತಿ, ಕುಮಾರ್, ಜಾಲಹಳ್ಳಿ ಸುರೇಶ್, ಗೀರಿಶ್, ಮಹೇಶ್, ಕುಪ್ಯ ಪುಟ್ಟಸ್ವಾಮಿ, ಪ್ರಸಾದ್ ನಾಯಕ್, ರಾಜೇಶ್, ಮಹದೇವಸ್ವಾಮಿ, ಸುರೇಶ್, ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin