ತಮಿಳುನಾಡಿನಿಂದ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಿಸುತ್ತಿದ್ದ ಲಾರಿಗಳ ವಶ
ಆನೇಕಲ್, ಅ.19-ತಮಿಳುನಾಡಿನಿಂದ ಅಕ್ರಮವಾಗಿ ಬೆಂಗಳೂರಿಗೆ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ಇಂದು ಮುಂಜಾನೆ ಕಂದಾಯ ಇಲಾಖೆ ಅಧಿಕಾರಿಗಳು ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ.25ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಬಹುತೇಕ ತಮಿಳುನಾಡು ನೋಂದಣಿ ಲಾರಿಗಳೇ ಎಂದು ತಿಳಿದುಬಂದಿದೆ.ಪ್ರತಿದಿನ ಇದೇ ಚೆಕ್ ಪೋಸ್ಟ್ ನಿಂದ ನೂರಾರು ಲಾರಿಗಳು ಯಾವುದೇ ಪರವಾನಗಿ ಇಲ್ಲದೆ, ತೆರಿಗೆ ವಂಚಿಸಿ ಅಕ್ರಮವಾಗಿ ಬೆಂಗಳೂರು ಕಡೆಗೆ ಸಾಗುತ್ತವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇಂದು ದಿಢೀರನೆ ಈ ದಾಳಿ ನಡೆಸಲಾಗಿದೆ.