ತಮಿಳುನಾಡು ಹೈಡ್ರಾಮಾ : ಶಶಿಕಲಾಗೆ ತಾತ್ಕಾಲಿಕ ರಿಲೀಫ್, ಗೊಂದಲದಲ್ಲಿ ರಾಜ್ಯಪಾಲ

Sasikala-Tamilnadu

ಚೆನ್ನೈ, ಫೆ.10 – ತ್ರಿಶಂಕು ರಾಜಕೀಯ ಸ್ಥಿತಿಗೆ ಸಿಲುಕಿರುವ ತಮಿಳುನಾಡಿಗೆ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬಗ್ಗೆ ರಾಜ್ಯಪಾಲ ವಿದ್ಯಾಸಾಗರರಾವ್ ತೀವ್ರ ಗೊಂದಲಕ್ಕೆ ಸಿಲುಕಿರುವಾಗಲೇ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ಇಂದು ಎರಡು ಹೊಸ ಕಂಟಕಗಳು ಎದುರಾಗಿವೆ.
ಈ ಮಧ್ಯೆ, 66 ಕೋಟಿ ರೂ. ಮೌಲ್ಯ ಅಕ್ರಮ ಆಸ್ತಿ ವಿದಾವಕ್ಕೆ ಸಂಬಂಧಪಟ್ಟಂತೆ ಫೆ.17ರವರೆಗೆ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿರುವ ಮೂಲಕ ಚಿನ್ನಮ್ಮಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ಶಶಿಕಲಾ ಸಲ್ಲಿಸಿರುವ ಬೆಂಬಲ ಪತ್ರದಲ್ಲಿನ ಸಹಿಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ರಾಜ್ಯಪಾಲರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ತಮಗೆ ನಿಷ್ಠರಾದ ಶಾಸಕರು ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣಕ್ಕೆ ಜಿಗಿಯುತ್ತಿರುವುದು ಚಿನ್ನಮ್ಮರನ್ನು ಕಂಗೆಡಿಸಿದೆ. ಸೆಲ್ವಂ ಪರ ಬೆಂಬಲ ವೃದ್ಧಿಯಾಗುತ್ತಿರುವುದರಿಂದ ವಿಚಲಿತರಾದ ಚಿನ್ನಮ್ಮ ಸರ್ಕಾರ ರಚನೆಗೆ ಕಾಂಗ್ರೆಸ್ ನೆರವು ಕೋರುತ್ತಿದ್ದಾರೆ.

ರಾಜಭವನ ನೀಡಿದ ಶಾಕ್ :

ತಮಗೆ 130 ಶಾಸಕರ ಬೆಂಬಲ ಇರುವುದರಿಂದ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಶಶಿಕಲಾ ಅವರು ನಿನ್ನೆ ಸಲ್ಲಿಸಿದ ಪತ್ರದ ಸಹಿಗಳ ಬಗ್ಗೆ ಗುಮಾನಿ ವ್ಯಕ್ತಪಡಿಸಿರುವ ರಾಜ್ಯಪಾಲರು ಇದನ್ನು ನಿಖರವಾಗಿ ದೃಢಪಡಿಸಿಕೊಳ್ಳಬೇಕಾಗಿದೆ. ಇದನ್ನು ವಿಧಾನಸಭಾಧ್ಯಕ್ಷರು ಮತ್ತು ಎಐಎಡಿಎಂಕೆ ಹಿರಿಯ ನಾಯಕರು ಖಚಿತಪಡಿಸಬೇಕು. ಆ ನಂತರವೇ ಔಪಚಾರಿಕವಾಗಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಷಷ್ಟವಾಗಿ ತಿಳಿಸಿದ್ದಾರೆ. ಇದರಿಂದ ಚಿನ್ನಮ್ಮಗೆ ಮತ್ತೊಮ್ಮೆ ಭಾರಿ ಮುಖಭಂಗವಾಗಿದೆ.   ಇದೇ ವೇಳೆ, ಶಶಿಕಲಾರಿಗೆ ಕೈಕೊಡುತ್ತಿರುವ ಶಾಸಕರ ಸಂಖ್ಯೆಯೂ ಹೆಚ್ಚಾಗಿತ್ತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಪನ್ನೀರ್ ಬಣ ಸೇರುತ್ತಿರುವುದು ಶಶಿಕಲಾರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಮ್ಮ ಪ್ರಾಬಲ್ಯ ಕ್ಷಿಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ತಮಗೆ ನೆರವು ನೀಡುವಂತೆ ಅವರು ಕಾಂಗ್ರೆಸ್ ಪಕ್ಷವನ್ನು ಕೋರಿದ್ದಾರೆ. ಇವರು ಕಾಂಗ್ರೆಸ್ ಹೈ ಕಮಾಂಡ್‍ನನ್ನು ಸಂಪರ್ಕಿಸಿರುವುದನ್ನು ಪಕ್ಷದ ಮೂಲಗಳು ಖಚಿತಪಡಿಸಿವೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಂಕೆ 135 ಸ್ಥಾನಗಳನ್ನು ಹೊಂದಿದೆ. ತಮ್ಮ ಪರ 130 ಶಾಸಕರ ಬೆಂಬಲವಿದೆ ಎಂದು ಶಶಿಕಲಾ ಹೇಳಿಕೊಂಡಿದ್ದರೂ ಅದು ದೃಢಪಟ್ಟಿಲ್ಲ. ಇನ್ನೊಂದೆಡೆ ತಮಗೆ 100 ಶಾಸಕರು ಬೆಂಬಲ ನೀಡಿಲು ಸಿದ್ದರಿದ್ದಾರೆ ಎಂದು ಪನ್ನೀರ್ ಸೆಲ್ವಂ ಬಣ ಹೇಳಿಕೊಂಡಿದೆ.   ತಮಗೆ ನಿಷ್ಠರಾದ ಶಾಸಕರ ಮೇಲೆ ನಂಬಿಕೆ ಕಳೆದುಕೊಂಡಿರುವ ಶಶಿಕಲಾ 8 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲ ಕೋರಲು ಮುಂದಾಗಿದ್ದಾರೆ. ಡಿಎಂಕೆ ಮಿತ್ರಪಕ್ಷವೂ ಆಗಿರುವ ಕಾಂಗ್ರೆಸ್ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

12 ಬೌನ್ಸರ್‍ಗಳ ನೇಮಕ :

ಈ ಮಧ್ಯೆ ತಮ್ಮ ಭದ್ರತಾಗಾಗಿ ಪನ್ನೀರ್ ಸೆಲ್ವಂ 12 ಬೌನ್ಸರ್‍ಗಳನ್ನು (ಅಂಗರಕ್ಷಕರು) ನೇಮಕ ಮಾಡಿಕೊಂಡಿದ್ದಾರೆ.   ಇಂದು ಮುಂಜಾನೆಯಿಂದಲೇ ಚೆನ್ನೈನ ಗ್ರೀನ್‍ವೇಸ್‍ನಲ್ಲಿರುವ ಸೆಲ್ವಂ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದವು. ಹಿರಿಯ ಮುಖಂಡರು, ಐಎಎಸ್ ಅಧಿಕಾರಿಗಳು ಮತ್ತು ನಿವೃತ್ತ ಉನ್ನತಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸುತ್ತಿದ್ದಾರೆ.

ಖಾಲಿ ಪತ್ರಕ್ಕೆ ಸಹಿ :

ಶಶಿಕಲಾ ವಿರುದ್ಧ ವಾಗ್ದಾಳಿ ಮಾಡಿರುವ ಪಕ್ಷದ ಹಿರಿಯ ಮುಖಂಡ ಮೈತ್ರೇಯನ್, ಶಾಸಕರನ್ನು ಗೃಹಬಂಧನದಲ್ಲಿಡಲಾಗಿದ್ದು, ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಶಶಿಕಲಾ ಅವರನ್ನು ಸಿಎಂ ಆಗಲು ಅವಕಾಶ ನೀಡಬಾರದೆಂದು ಟ್ರಾಫಿಕ್ ರಾಮಸ್ವಾಮಿ ಮದ್ರಾಸ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದಾರೆ.

ತಾತ್ಕಾಲಿಕ ರಿಲೀಫ್ :

ಈ ಮಧ್ಯೆ, 66 ಕೋಟಿ ರೂ. ಮೌಲ್ಯ ಅಕ್ರಮ ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಫೆ.17ರವರೆಗೆ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿರುವ ಮೂಲಕ ಚಿನ್ನಮ್ಮಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin