ತಮ್ಮನ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

Spread the love

murder

ಕೋಲಾರ,ಆ.17-ಕಳೆದ 2005ರಲ್ಲಿ ತಮ್ಮನನ್ನು ಕೊಲೆ ಮಾಡಿದ್ದ ಅಣ್ಣನಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕೋಲಾರ ತಾಲ್ಲೂಕಿನ ಮುಗಟೂರು ಗ್ರಾಮದಲ್ಲಿ ಕಳೆದ 2005 ಫೆಬ್ರವರಿ 5ರಂದು ಮೋಹನ್ ಎಂಬುವರ ಕೊಲೆ ನಡೆದಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕೌಟುಂಬಿಕ ಕಲಹದಿಂದ ಈ ಕೊಲೆ ನಡೆದಿದೆ ಎಂದು ಸುಳಿವು ಪಡೆದು ಮೋಹನ್ ಅಣ್ಣನಾಗರಾಜನನ್ನು ಬಂಧಿಸಿ ವಿಚಾರಿಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿತು. ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿ ಸುದೀರ್ಘ ವಿಚಾರಣೆ ನಂತರ 14 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಆರೋಪಿ ನಾಗರಾಜ್ ಮೇಲಿದ್ದ ಆರೋಪಗಳು ಸಾಬೀತಾದ ಕಾರಣ ಅಪರಾಧಿ ಎಂದು ಘೋಷಿಸಿ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇದಲ್ಲದೆ 10 ಸಾವಿರ ದಂಡ ಕೂಡ ವಿಧಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin