ತಲಕಾವೇರಿಯಲ್ಲಿ ಜೆಡಿಎಸ್ನಿಂದ ವಿಶೇಷ ಪೂಜೆ
ಬೆಂಗಳೂರು,ಆ.31-ರಾಜ್ಯ ಎದುರಿಸುತ್ತಿರುವ ಮಳೆ ಕೊರತೆ, ನೀರಿನ ಅಭಾವದ ಹಿನ್ನೆಲೆಯಲ್ಲಿ ಕಾವೇರಿ ನದಿಯ ಉಗಮ ಸ್ಥಾನವಾದ ತಲ ಕಾವೇರಿಯಲ್ಲಿ ನಾಳೆ ಬೆಳಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಪುಟ್ಟರಾಜು ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಳೆಗಾಲದಲ್ಲಿ ನಾಡಿನ ಜೀವ ಸೆಲೆಯಾದ ಕೆಆರ್ಎಸ್ ಅಣೆಕಟ್ಟೆ ಭರ್ತಿ ಯಾಗಬೇಕಿತ್ತು. ಆದರೆ ಈ ಬಾರಿ ಅಗತ್ಯವಾಗಿರುವಷ್ಟು ಮಳೆ ಬೀಳದೆ ಕೆಆರ್ಎಸ್ ತುಂಬಿಲ್ಲ. ಬೆಳೆಗಳು ಹಾಗೂ ಕುಡಿಯಲು ನೀರಿಲ್ಲದ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ.
ಜಾಗ್ವಾರ್ ಸಿಡಿ ಬಿಡುಗಡೆ: ಮಂಡ್ಯದ ವಿಶ್ವೇಶ್ವರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2ರಂದು ಸಂಜೆ 5.30ಕ್ಕೆ ಜಾಗ್ವಾರ್ ಚಿತ್ರದ ಸಿಡಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಗೌಡ ಅಭಿನಯನದ ಈ ಚಿತ್ರವನ್ನು ನಿರ್ದೇಶಕ ಮಹದೇವ್ ನಿರ್ದೇಶಿಸುತ್ತಿದ್ದು , ಖ್ಯಾತ ನಿರ್ದೇಶಕ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಅವರ ಕಥೆ, ಚಿತ್ರಕಥೆ ಇದಕ್ಕಿದೆ.