ತವರಿಗೆ ಆಗಮಿಸಿದ ದೀಪಾ ಕರ್ಮಾಕರ್ ಗೆ ಅದ್ದೂರಿ ಸ್ವಾಗತ
ನವದೆಹಲಿ ಆ. 20-ರಿಯೋ ಒಲಿಂಪಿಕ್ ಕ್ರೀಡಾಕೂಟದ ಜಿಮ್ನಾಸ್ಟಿಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿರುವ ದೀಪಾ ಕರ್ಮಾಕರ್ ಇಂದು ಮುಂಜಾನೆ ತವರಿಗೆ ಆಗಮಿಸಿದರು. ದೀಪಾ ಕರ್ಮಾಕರ್ ಅವರನ್ನು ಸ್ನೇಹಿತರು, ಕುಟುಂಬಸ್ಥರು, ಕ್ರೀಡಾ ಸಚಿವಾಲಯ ಮತ್ತು ಜಿಮ್ನಾಸ್ಟಿಕ್ ಸಂಸ್ಥೆಯ ಅಧಿಕಾರಿಗಳು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೀಪ ಕರ್ಮಾಕರ್ ತಮಗೆ ಸಿಕ್ಕಿರುವ ಗೌರವ ನೋಡಿ ಆನಂದಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ದೀಪಾ, ಏಳು ಅಥವಾ ಎಂಟನೇ ಸ್ಥಾನದಲ್ಲಿ ಇರುತ್ತೇನೆ ಅಂದುಕೊಂಡಿದ್ದೆ. ನಾಲ್ಕನೇ ಸ್ಥಾನದಲ್ಲಿ ನಿಂತಿದ್ದು ಖುಷಿ ಇದೆ. ಮುಂದಿನ ಒಲಿಂಪಿಕ್ಸ್ನಲ್ಲಿ ಸ್ವರ್ಣ ಗೆದ್ದೇ ಗೆದ್ದು ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ಈ ವೇಳೆ ಪ್ರತಿಕ್ರಿಯಿಸಿದ ದೀಪಾ ಅವರ ಕೋಚ್ ಬಿಶೇಶ್ವರ್ ನಂದಿ, ದೀಪಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾಳೆ. ಈ ಬಗ್ಗೆ ನನಗೆ ತುಂಬಾ ಖುಷಿ ಇದೆ. ಪದಕ ಗೆದ್ದಷ್ಟೇ ಸಂತೋಷವಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುತ್ತಾಳೆನ್ನುವ ವಿಶ್ವಾಸವಿದೆ ಎಂದು ಹೇಳಿದರು.ದೀಪಾ ಸಂಜೆ ತನ್ನ ತವರಿಗೆ ತೆರಳುವ ಸಾಧ್ಯತೆ ಇದೆ.
Comments are closed.