ತಾಂತ್ರಿಕ ದೋಷ : ಟೇಕ್‍ಆಫ್‍ಗೆ ರೆಡಿಯಾಗಿದ್ದ ವಿಮಾನ ರನ್‍ವೇಗೆ ವಾಪಸ್

Spread the love

Jet-Airways--01

ಬೆಂಗಳೂರು, ಏ.18- ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಟೇಕ್‍ಆಫ್‍ಗೆ ರೆಡಿಯಾಗಿದ್ದ ವಿಮಾನ ರನ್‍ವೇಯಿಂದ ವಾಪಸ್ ಮರಳಿರುವ ಘಟನೆ ಇಂದು ಮುಂಜಾನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸುಮಾರು 6.10ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಡಬೇಕಿದ್ದ ಜೆಟ್ ಏರ್‍ವೇಸ್ ವಿಮಾನದ ಎಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ವೇಳೆ ಅಪಾಯ ಅರಿತ ಪೈಲೆಟ್ ಸುರಕ್ಷಿತವಾಗಿ ರನ್‍ವೇಯಿಂದ ಹ್ಯಾಂಗರ್‍ಗೆ ಲ್ಯಾಂಡ್ ಮಾಡಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin