ತಾಯ್ನಾಡಿಗೆ ಮರಳಲು ಭಾರತೀಯ ಮಹಿಳೆಗೆ ಪಾಕ್ ಕೋರ್ಟ್ ಅನುಮತಿ

Uzma

ಇಸ್ಲಾಮಾಬಾದ್,ಮೇ 24- ತನ್ನನ್ನು ಪಾಕಿಸ್ತಾನಿ ವ್ಯಕ್ತಿ ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ ಭಾರತೀಯ ಮಹಿಳೆ ಉಜ್ಮಾ ತನ್ನ ತಾಯ್ನಾಡಿಗೆ ಹಿಂದಿರುಗಲು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಉಜ್ಮಾ ತನ್ನ ತಾಯ್ನಾಡಿಗೆ ಹಿಂದಿರುಗಬಹುದು ಎಂದು ಇಸ್ಲಾಮಾಬಾದ್ ಹೈಕೋರ್ಟ್‍ನ ನ್ಯಾಯಮೂರ್ತಿ ಮೊಹಿಸಿನ್ ಅಖ್ತರ್ ಕಯಾನಿ ನೇತೃತ್ವದ ಪೀಠ ಹೇಳಿದೆ.ಆಕೆ ಪತ್ನಿ ತಾಹಿರ್ ಅಲಿ ಕೋರ್ಟ್‍ಗೆ ಸಲ್ಲಿಸಿದ್ದ ಮೂಲ ವಲಸೆ ಅರ್ಜಿಯನ್ನು ನ್ಯಾಯಾಲಯ ಉಜ್ಮಾ ಅವರು ಹಿಂದಿರುಗಿಸಿದೆ. ಉಜ್ಮಾ ವಾಘ್ ಗಡಿ ದಾಟಿ ಭಾರತಕ್ಕೆ ಕಾಲಿಡುವ ತನಕ ಆಕೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin