ತಾಲಿಬಾನ್ ಉಗ್ರರ ದಾಳಿಗೆ 150ಕ್ಕೂ ಹೆಚ್ಚು ಅಫ್ಘಾನ್ ಯೋಧರ ಸಾವು

Spread the love

Taliban--01

ಕಾಬೂಲ್, ಏ.22-ಮಾಝಾರೆ ಶರೀಫ್ ನಗರದಲ್ಲಿರುವ ಆಫ್ಘಾನ್ ನ್ಯಾಷನಲ್ ಆರ್ಮಿ ಕಾಪ್ರ್ಸ್ ಪ್ರಧಾನ ಕಚೇರಿ ಬಳಿ ಮಸೀದಿ ಮೇಲೆ ತಾಲಿಬಾನ್ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 150ಕ್ಕೂ ಹೆಚ್ಚು ಸೈನಿಕರು ಮತ್ತು ಅಧಿಕಾರಿಗಳು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಒಂಭತ್ತು ಬಂಡುಕೋರರು ಹತರಾಗಿದ್ದು, ಒಬ್ಬನನ್ನು ಸೆರೆ ಹಿಡಿಯಲಾಗಿದೆ.   ಉತ್ತರ ಬಲ್ಖ್ ಪ್ರಾಂತ್ಯದ ರಾಜಧಾನಿಯಲ್ಲಿರುವ 209ನೇ ಶಹೀನ್ ಕಾಪ್ರ್ಸ್ ಕೇಂದ್ರ ಕಚೇರಿ ಸುತ್ತಮುತ್ತ ಭಾರೀ ಬಾಂಬ್  ಮತ್ತು ಗುಂಡಿನ ಅಬ್ಬರ ಪ್ರತಿಧ್ವನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. .

ಭದ್ರತಾಪಡೆಗಳಿಗೆ ಸೇರಿದ ವಾಹನಗಳನ್ನು ವಶಪಡಿಸಿಕೊಂಡ ಯೋಧರ ಸಮವಸ್ತ್ರದಲ್ಲಿದ್ದ ತಾಲಿಬಾನ್ ಉಗ್ರರು ಹಲವು ಹಂತಗಳ ಭದ್ರತಾ ಕಾವಲನ್ನು ದಾಳಿ ಕೇಂದ್ರ ಕಚೇರಿ ಬಳಿ ನುಗ್ಗಿದರು. ಹತ್ತಿರದಲ್ಲೇ ಇದ್ದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಯೋಧರು ಮತ್ತು ಅಧಿಕಾರಿಗಳ ಮೇಲೆ ಭಯಾನಕ ದಾಳಿ ನಡೆಸಿದರು.   ಹತ್ತು ತಾಲಿಬಾನ್ ಉಗ್ರರಲ್ಲಿ ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡರೆ, ಇನ್ನುಳಿದ ಬಂಡುಕೋರರು ಯೋಧರ ಮೇಲೆ ಮನಸೋಇಚ್ಧೆ ಗುಂಡಿನ ದಾಳಿ ನಡೆಸಿದರು. ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಏಳು ಭಯೋತ್ಪಾದಕರು ಹತರಾದರು. ಒಬ್ಬನನ್ನು ಸೆರೆ ಹಿಡಿಯಲಾಗಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ಖಂಡನೆ: ಸೇನಾನೆಲೆ ಮೇಲೆ ದಾಳಿ ನಡೆಸಿ ಯೋಧರನ್ನು ಕೊಂದಿರುವ ತಾಲಿಬಾನ್ ಉಗ್ರರ ಭಯೋತ್ಪಾದನೆ ಕೃತ್ಯವನ್ನು ಪ್ರಧಾನಿ ನರೇಂದ್ರಮೋದಿ ಖಂಡಿಸಿದ್ದಾರೆ. ಇದು ಹೇಡಿಗಳ ಕೃತ್ಯ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin