ತಾಲೂಕು ಬರಪೀಡಿತ ಘೋಷಣೆಗೆ ಜೆಡಿಎಸ್ ಒತ್ತಾಯ

gbr2

ಗೌರಿಬಿದನೂರು, ಅ.4- ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಹಾಗೂ ಕಳೆದ ವರ್ಷ ಬೆಳೆ ನಷ್ಟ ಪರಿಹಾರ ವಿತರಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪಕ್ಷದ ತಾಲೂಕು ಘಟಕದ ಕಾರ್ಯದಕ್ಷ ಕೆ.ಎಸ್.ಅನಂತರಾಜು ಮಾತನಾಡಿ, ಪ್ರಸಕ್ತ ವರ್ಷದ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರೂ ಸಹ ಪ್ರಯೋಜನವಾಗಿಲ್ಲ, ಶೇ.90 ರಷ್ಟು ಬೆಳೆಗಳು ಒಣಗಿಹೋಗಿದ್ದು, ರೈತರ ಸ್ಥಿತಿ ಅತಂತ್ರವಾಗಿದೆ, ಇಂತಹ ಪರಿಸ್ಥಿತಿಯಲ್ಲೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ, ಜಿಲ್ಲಾಢಳಿತ ಹಾಗೂ ರಾಜ್ಯ ಸರಕಾರ ಈ ಕೂಡಲೇ ತಾಲೂಕಿನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಇಲ್ಲವಾದಲ್ಲಿ ಪಕ್ಷದ ವತಿಯಿಂದ ಉಗ್ರಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ನಂತರ ಕಾರ್ಯಕರ್ತರು ತಾಲೂಕು ಕಚೇರಿ ಆವರಣಕ್ಕೆ ತೆರಳಿ ತಹಸೀಲ್ದಾರ್ ಎಂ.ನಾಗರಾಜ್ ರವರ ಮೂಲಕ ಸರಕಾರಕ್ಕೆ ಮನವಿ ಪತ್ರಸಲ್ಲಿಸಿದರು.ಪುರಸಭಾ ಸದಸ್ಯ ಸುಭಾನ್‍ಖಾನ್, ರತ್ನಯ್ಯ, ಜೆಡಿಎಸ್ ಪಕ್ಷದ ಮುಖಂಡರಾದ ಎಸ್.ಎಚ್.ಲಕ್ಷ್ಮೀನಾರಾಯಣ, ಎ.ಎನ್.ವೇಣು, ಆರ್.ಆಶೋಕ್‍ಕುಮಾರ್, ಧರಣೇಂದ್ರಯ್ಯ, ಶ್ರೀನಿವಾಸ್‍ಪ್ರಸನ್ನ, ರಾಜು ಗ್ರಾ.ಪಂ.ಸದಸ್ಯರಾದ ಆನಂದ್, ರಂಗಪ್ಪ,ಗೋಪಾಲ್, ಹನುಮಂತು ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin