ತಾಲ್ಲೂಕು ಮಡಿವಾಳ ಸಂಘಕ್ಕೆ ಆಯ್ಕೆ

Spread the love

hiriyuru

ಹಿರಿಯೂರು, ಆ.30- ತಾಲ್ಲೂಕು ಮಡಿವಾಳ ಸಂಘಕ್ಕೆ ನಗರದ ಗುರುಭವನದಲ್ಲಿ ಸಮಾಜದ ಹಿರಿಯ ಮುಖಂಡರ ನೇತೃತ್ವದಲ್ಲಿ ಸಭೆ ಸೇರಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿ.ಸಿದ್ದೇಶ್ ಅಧ್ಯಕ್ಷರಾಗಿ, ಡಾ.ಎಂ.ಹನುಮಂತರಾಯಪ್ಪ ಪ್ರಧಾನ ಕಾರ್ಯದರ್ಶಿಯಾಗಿ, ಎನ್.ಬಸವರಾಜು ಸಂಚಾಲಕರನ್ನಾಗಿ, ಎಸ.ವಿ.ಸಿದ್ದಪ್ಪ ಉಪಾಧ್ಯಕ್ಷರನ್ನಾಗಿ, ಡಿ.ತಿಪ್ಪೇಸ್ವಾಮಿ ಸಹಕಾರ್ಯದರ್ಶಿಯಾಗಿ, ರಾಘವೇಂದ್ರ, ಖಜಾಂಚಿರನ್ನಾಗಿ, ಎಂ.ಎ.ಶಿವರಾಂ, ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಸಂಘದ ಗೌರವಧ್ಯಕ್ಷ ಎಂ.ಹಾಲಪ್ಪಅವರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮೇಲ್ಕಂಡರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Sri Raghav

Admin