ತಿಂಗಳಾಂತ್ಯಕ್ಕೆ ಮೇಯರ್ ಚುನಾವಣೆ, ಮತದಾರರ ಪಟ್ಟಿ ರೆಡಿ

BBMP--01

ಬೆಂಗಳೂರು, ಸೆ.6- ತಿಂಗಳಾಂತ್ಯ ದಲ್ಲಿ ನಡೆ ಯಲಿರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾ ಯಿಸುವ ಮತದಾರರ ಪಟ್ಟಿ ಸಿದ್ಧವಾಗಿದೆ. ಮತದಾನದ ಹಕ್ಕು ಹೊಂದಿರುವ 53 ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಪಟ್ಟಿ ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಕಚೇರಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿಗೆ ರವಾನೆಯಾಗಿದೆ. ಮತದಾರರ ಪಟ್ಟಿಯಂತೆ ರಾಜ್ಯಸಭಾ ಸದಸ್ಯರಾದ ರೆಹಮಾನ್ ಖಾನ್, ಕುಪೇಂದ್ರರೆಡ್ಡಿ, ರಾಜೀವ್ ಚಂದ್ರಶೇಖರ್, ರಾಜೀವ್‍ಗೌಡ, ಬಿ.ಕೆ.ಹರಿಪ್ರಸಾದ್, ರಾಮಕೃಷ್ಣ, ಕೆ.ಸಿ.ರಾಮಮೂರ್ತಿ, ಜಯರಾಮ್ ರಮೇಶ್, ಆಸ್ಕರ್ ಫರ್ನಾಂಡಿಸ್, ನಿರ್ಮಲಾ ಸೀತಾರಾಮನ್, ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್, ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್, ಅನಂತ್‍ಕುಮಾರ್, ವೀರಪ್ಪಮೊಯ್ಲಿ.

ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಜಯಮಾಲಾ, ರಿಜ್ವಾನ್ ಹರ್ಷದ್, ಉಗ್ರಪ್ಪ, ಎಚ್.ಎಂ.ರೇವಣ್ಣ, ರಘು ಆಚಾರ್, ಎಂ.ನಾರಾಯಣಸ್ವಾಮಿ, ಕೆ.ಗೋವಿಂದರಾಜ್, ತಾರಾ ಅನುರಾಧಾ, ಸೋಮಣ್ಣ, ರಾಮಚಂದ್ರಗೌಡ, ಲೆಹರ್‍ಸಿಂಗ್, ಬಿ.ಜಿ.ಪುಟ್ಟಸ್ವಾಮಿ, ಕೆ.ವಿ.ನಾರಾಯಣಸ್ವಾಮಿ, ಟಿ.ಎ.ಶರವಣ, ಸಿ.ಆರ್.ಮನೋಹರ್, ಅಪ್ಪಾಜಿಗೌಡ, ಪುಟ್ಟಣ್ಣ, ಬಿ.ಎಸ್. ಸುರೇಶ್, ಡಿ.ಯು.ಮಲ್ಲಿಕಾರ್ಜುನ, ಎಸ್.ರವಿ, ರಮೇಶ್‍ಬಾಬು,  ಪಿ.ಆರ್. ರಮೇಶ್, ಸಿ.ಎಂ.ಇಬ್ರಾಹಿಂ ಹಾಗೂ ಶಾಸಕರಾದ ಎಸ್. ಆರ್ . ವಿಶ್ವನಾಥ್, ಭೈರತಿ ಬಸವರಾಜ್, ಕೃಷ್ಣ ಭೈರೇಗೌಡ, ಎಸ್.ಟಿ.ಸೋಮಶೇಖರ್, ಮುನಿರತ್ನ, ಎಸ್.ಮುನಿರಾಜು, ಕೆ.ಗೋಪಾಲಯ್ಯ, ಡಾ.ಅಶ್ವತ್ಥ ನಾರಾಯಣ, ವೈ.ಎ.ನಾರಾಯಣಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಕೆ.ಜೆ.ಜಾರ್ಜ್, ಎಸ್.ರಘು, ರೋಷನ್ ಬೇಗ್, ಹ್ಯಾರಿಸ್, ದಿನೇಶ್ ಗುಂಡೂರಾವ್, ಸುರೇಶ್‍ಕುಮಾರ್, ಪ್ರಿಯಕೃಷ್ಣ, ಕೃಷ್ಣಪ್ಪ, ಜಮೀರ್ ಅಹಮ್ಮದ್, ಆರ್.ವಿ.ದೇವರಾಜ್, ರವಿ ಸುಬ್ರಹ್ಮಣ್ಯ, ಆರ್.ಅಶೋಕ್, ರಾಮಲಿಂಗಾರೆಡ್ಡಿ, ಬಿ.ಎನ್.ವಿಜಯ್‍ಕುಮಾರ್, ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ, ಶಿವಣ್ಣ ಹಾಗೂ ಬಿಬಿಎಂಪಿಯ 198 ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ.

ಹಕ್ಕು ಕಳೆದುಕೊಂಡವರು:

ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಂಟು ಎಂಎಲ್‍ಸಿಗಳು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿ ವಿಧಾನ ಪರಿಷತ್‍ನಿಂದ ಟಿಎ ಪಡೆದು ವಂಚಿಸಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಚುನಾವಣಾ ಆಯೋಗ ಮತ್ತು ಸಭಾಪತಿಗಳಿಗೆ ದೂರು ನೀಡಿದ್ದರು.   ಹೀಗಾಗಿ ಮೇಯರ್ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ ಎಂ.ಡಿ.ಲಕ್ಷ್ಮಿನಾರಾಯಣ್, ಆರ್.ಬಿ.ತಿಮ್ಮಾಪುರ, ಬೋಸರಾಜ್, ಡಾ.ಜಿ.ಪರಮೇಶ್ವರ್ ಮತ್ತಿತರರು ತಮ್ಮ ಮತದಾರರ ಚೀಟಿಯನ್ನು ತಮ್ಮ ಹುಟ್ಟೂರಿಗೆ ವರ್ಗಾಯಿಸಿಕೊಂಡಿ ರುವುದರಿಂದ ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿ ಸುವಂತಿಲ್ಲ. ಆದರೆ, ಆರೋಪಕ್ಕೆ ಗುರಿಯಾಗಿದ್ದ ರಘು ಆಚಾರ್, ಮನೋಹರ್, ಎಸ್.ರವಿ, ಅಪ್ಪಾಜಿಗೌಡ ಬೆಂಗಳೂರು ನಿವಾಸಿಗಳಾಗಿರುವುದರಿಂದ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

ತಿಂಗಳಾಂತ್ಯಕ್ಕೆ ಚುನಾವಣೆ:

ಕೌನ್ಸಿಲ್ ಕಾರ್ಯದರ್ಶಿಯಿಂದ ಮತದಾರರ ಪಟ್ಟಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ರವಾನೆಯಾಗಿರುವುದರಿಂದ ತಿಂಗಳಾಂತ್ಯದಲ್ಲಿ ಬಿಬಿಎಂಪಿ ಮೇಯರ್‍ಗೆ ಚುನಾವಣೆ ನಡೆಯಲಿದೆ.

Sri Raghav

Admin