ತಿಮ್ಮಪ್ಪನ ದರ್ಶನ ಪಡೆದ ರಾಜನಾಥ್ ಸಿಂಗ್
ತಿರುಪತಿ, ಜ.10-ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ತಿರುಮಲ ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ತಾನದ ಆಡಳಿತ ಮಂಡಳಿ ಪದಾಕಾರಿಗಳು ಸಿಂಗ್ ಅವರಿಗೆ ಪವಿತ್ರ ರೇಷ್ಮೆ ವಸ್ತ್ರ ಮತ್ತು ಲಡ್ಡು ಪ್ರಸಾದ ನೀಡಿದರೆ, ಪ್ರಧಾನ ಅರ್ಚಕರು ಅವರಿಗೆ ವಿಶೇಷ ಅಶೀರ್ವಾದದ ವ್ಯವಸ್ಥೆ ಮಾಡಿದರು. ಕಳೆದ ಡಿ.11ರಂದು ತಿರುಪತಿಗೆ ಭೇಟಿ ನೀಡಿದ್ದ ಸಿಂಗ್, ಇಪ್ಪತ್ತು ದಿನಗಳ ಅವಯಲ್ಲಿ ಎರಡನೇ ಬಾರಿಗೆ ವಿಶ್ವವಿಖ್ಯಾತ ದೇವಸ್ಥಾನದಲ್ಲಿ ತಿಮ್ಮಪ್ಪನ ದರುಶನ ಪಡೆದಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments