ತಿರುವನಂತಪುರಂ-ಮಂಗಳೂರು ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 12 ಬೋಗಿಗಳು ಪಲ್ಟಿ

Spread the love

Train-1

ಕೊಚ್ಚಿ, ಆ.28– ಮಂಗಳೂರು ಮತ್ತು ತಿರುವನಂತಪುರಂ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ಕೇರಳದ ಕರುಕುಟ್ಟಿ ರೈಲು ನಿಲ್ದಾಣದ ಬಳಿ ಇಂದು ಬೆಳಗಿನ ಜವ ನಡೆದಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ದಕ್ಷಿಣ ರೆಲ್ವೆ ಹೇಳಿದೆ. ನಿನ್ನೆ ರಾತ್ರಿ 8.40ಕ್ಕೆ ತಿರುವನಂತಪುರಂನಿಂದ ಹೊರಟಿದ್ದ ಈ ಟ್ರೈನ್ನ 12 ಬೋಗಿಗಳು ಹಳಿ ತಪ್ಪಿವೆ. ಎರ್ನಾಕುಲಂ ಜಿಲ್ಲೆಯ ಅಳುವು ಮತ್ತು ಕರುಕುಟ್ಟಿ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಘಟನೆ ನಂತರ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ತ್ರಿಶೂರು ಮತ್ತು ಕೊಚ್ಚಿಗೆ ಲೋಕಲ್ ಟ್ರೈನ್ ಮತ್ತು ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ಘಟನೆಯಿಂದ ಕೇರಳದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಲೋಕಲ್ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ತಾತ್ಕಾಲಿಕವಾಗಿ ರೈಲು ಸಂಚಾರವನ್ನು ತಡೆ ಹಿಡಿಯಲಾಗಿದೆ. 6 ರಿಂದ 10 ಗಂಟೆಗಳ ಕಾಲ ಹಳಿ ದುರಸ್ತಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ತಿರುವನಂತಪುರ-ಮುಂಬೈ, ಕನ್ಯಾಕುಮಾರಿ-ಬೆಂಗಳೂರು, ಆಲಪುಳ-ಧನ್ಬಾದ್, ತಿರುವನಂತಪುರ-ಗೋರಖ್ಪುರ್ ರಪ್ತಿಸಾಗರ್, ತಿರುವನಂತಪುರ-ಹೈದರಾ ಬಾದ್ ಶತಾಬ್ಜಿ ಎಕ್ಸ್ಪ್ರೆಸ್ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ. ಅಮೃತಾ ಎಕ್ಸ್ಪ್ರೆಸ್, ನಿಲಂಬೂರ್ ರಾಜ್ಯರಾಣಿ ಎಕ್ಸ್ಪ್ರೆಸ್, ಎಗ್ಮೋರ್ – ಗುರುವಾಯೂರ್ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.  ರೈಲ್ವೆ ಇಲಾಖೆಯ

ಸಹಾಯವಾಣಿ ಸಂಖ್ಯೆ: 0471-2320012 ಮತ್ತು 9746769960.

Train-02

► Follow us on –  Facebook / Twitter  / Google+

Facebook Comments

Sri Raghav

Admin