ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಸ್ಪಂದಿಸಲಿ : ರಂಗಾಪುರಶ್ರೀ

tipaturu
ತಿಪಟೂರು. ಏ. 6- ಮಠಗಳ ಅಭಿವೃದ್ದಿ, ಏಳಿಗೆಗೆ ಭಕ್ತರ ಒಗ್ಗಟ್ಟಿನ ಶಕ್ತಿ, ಸಹಕಾರ ಜೊತೆಗೆ ಶ್ರೀ ಕ್ಷೇತ್ರದ ಮೇಲಿರುವ ಅಪಾರ ನಂಬಿಕೆಯ ಅಭಿಮಾನ, ಭಕ್ತಿಯ ಜೊತೆಗೆ ಅವರು ನೀಡುತ್ತಿರುವ ಸಹಕಾರ ಸ್ಮರಿಸುವಂತದ್ದು ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ 65ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಜನ್ಮವರ್ಧಂತಿ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಹಿಂದೆಂದಿಗಿಂತಲೂ ರೈತರ ಬದುಕು ಸಂಕಷ್ಟದಲ್ಲಿದೆ. ಪ್ರಕೃತಿಯ ನಾಶದಿಂದ ಉಂಟಾಗುತ್ತಿರುವ ಅಸಮತೋಲನವೂ ಇಂದಿನ ಬರಗಾಲಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರೂ ಮರಗಿಡಗಳನ್ನು ರಕ್ಷಿಸುವ ಕಾಯಕಕ್ಕೆ ಮುಂದಾಗಬೇಕಿದೆ ಎಂದರು.

ಗೋಡೆಕೆರೆ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಮಠವು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡುವ ಮೂಲಕ ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಮಾನವೀಯ ಮೌಲ್ಯದ ನೆಲೆಯಲ್ಲಿ ಕಾಯಕ ಮಾಡುತ್ತಿದೆ ಎಂದರು. ಮಾಡಾಳುವಿನ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಸುಕ್ಷೇತ್ರದಲ್ಲಿ ಈಗಾಗಲೆ 6 ಘನವಂತ ಶಿವಯೋಗಿಗಳು ಆಗಿಹೋಗಿದ್ದು, ಜನಮಾನಸದಲ್ಲಿ ಅವರು ನಡೆಸಿದ ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಅಚ್ಚಳಿಯದೆ ಉಳಿದಿದ್ದಾರೆ ಎಂದರು.ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಶ್ರೀಮಠ ಜಾತ್ಯಾತೀತ ಮಠವಾಗಿದ್ದು, 12ನೇ ಶತಮಾನದ ಕಾಯಕಯೋಗಿ ಬಸವಣ್ಣನವರ ತತ್ವ ಚಿಂತನೆಗಳನ್ನು ಎಲ್ಲರಲ್ಲಿಯೂ ಮೂಡಿಸುತ್ತಾ ಅಂದಿನ ಅನುಭವ ಮಂಟಪದಂತೆ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಮುನ್ನಡೆಯುತ್ತಿದೆ ಎಂದರು.

ಮಾಜಿ ಶಾಸಕ ಬಿ.ಸಿ. ನಾಗೇಶ್, ನಿವೃತ್ತ ಉಪನ್ಯಾಸಕ ತಗಡೂರು ವೀರಭದ್ರಪ್ಪ ಹಾಗೂ ಸಿದ್ದಗಂಗಾ ಸಂಸ್ಕೃತ  ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ  . ಕೆ. ಬಸವರಾಜು, ನಮ್ರತಾ ಆಯಿಲ್‍ನ ಶಿವಪ್ರಸಾದ್, ಜೆಡಿಎಸ್ ಮುಖಂಡರಾದ ಲೋಕೇಶ್ವರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್.ಬಿ. ದಿವಾಕರ್, ಕಾಂಗ್ರೆಸ್ ಮುಖಂಡ ಜಯಣ್ಣ, ಪ್ರಧಾನ ಕಾರ್ಯದರ್ಶಿ ಯು.ಬಿ. ಶಿವಪ್ಪ, ಉಪಾಧ್ಯಕ್ಷ ಬಸವರಾಜು, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ನಗರಸಭೈ ಅಧ್ಯಕ್ಷ ಟಿ.ಎನ್. ಪ್ರಕಾಶ್, ಪೌರಾಯುಕ್ತ ಚಂದ್ರಶೇಖರ್, ಸದಸ್ಯ ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin