ತುಮಕೂರು ಜಿಲ್ಲಾಸ್ಪತ್ರೆಯಲ್ಲಿದ್ದಾರೆ ಮಾನವೀಯತೆಯಿಲ್ಲದ ವೈದ್ಯರು..!

Spread the love

Tumakuru-Hospital

ತುಮಕೂರು,ಫೆ.6-ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೈಡ್ರಾಮಾ ನಡೆಯಿತು. ಅಪಘಾತಕ್ಕೀಡಾಗಿ ಚಿಕಿತ್ಸೆಗೆಂದು ಬಂದವರನ್ನು ಅಡ್ಮಿಟ್ ಮಾಡಿಕೊಳ್ಳದೆ ಕೇವಲ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲು ಮುಂದಾದ ವೈದ್ಯರ ವಿರುದ್ದ ರೋಗಿಗಳು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.   ವೈದ್ಯರು ಮಾನವೀಯತೆ ಮರೆತು ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಬೈಕ್ ಅಪಘಾತವಾಗಿ ಚಿಕಿತ್ಸೆಗೆಂದು ಬಂದವರಿಗೆ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರೋಗಿ ಕರಿಸಿದ್ದಯ್ಯ ಎಂಬುವರು ಆರೋಪಿಸಿದ್ದಾರೆ.
ಊರ್ಡಿಗೆರೆ ಸಮೀಪ ನಿನ್ನೆ ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಾಳುಗಳಾದ ಕರಿಸಿದ್ದಯ್ಯ ಹಾಗೂ ಹೇಮರಾಜು ಎಂಬುವರು ಸರ್ಕಾರಿ ಆಸ್ಪತ್ರೆಗೆ ಬಂದಾಗ ಪ್ರಾಥಮಿಕ ಚಿಕಿತ್ಸೆ ನೀಡಿ ವೈದ್ಯರು ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಆದರೆ ಗಾಯಾಳುಗಳು ಪೆಟ್ಟು ಹೆಚ್ಚಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಮತ್ತು ಗಾಯಾಳುಗಳು ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವಂತೆ ಗಾಯಾಳು ಅಂಗಲಾಚಿದರೂ ವೈದ್ಯರು ಸ್ಪಂದಿಸಲಿಲ್ಲ ಎಂದು ಕರಿಸಿದ್ದಯ್ಯ ಆರೋಪ ಮಾಡಿದ್ದಾರೆ. ಕೊನೆಗೆ ನೋವಿನಲ್ಲಿ ನರಳುತ್ತಿರುವ ಕರಿಸಿದ್ದಯ್ಯನವರನ್ನು ಸಂಬಂಧಿಕರು ಅಂತಿಮವಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.   ಇದಕ್ಕೆ ಪ್ರತಿಕ್ರಿಯಿಸಿರುವ ವೈದ್ಯರಾದ ಡಾ.ವಾಸೀಮ್, ವೈದ್ಯನಾಗಿರುವ ನನಗೆ ರೋಗಿಯ ಪರಿಸ್ಥಿತಿ ಏನೆಂಬುದು ಗೊತ್ತು ಅನಗತ್ಯವಾಗಿ ಕರಿಸಿದಯ್ಯ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಂತಹ ಯಾವುದೇ ಗಾಯ ಆಗಿಲ್ಲ. ಹಾಗಾಗಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ತಿಳಿಸಿದ್ದೇವೆ. ಆದರೂ ಹಠ ಮಾಡಿ ರಂಪ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರಕರಣದಲ್ಲಿ ಯಾವುದು ಸರಿ, ಯಾವುದು ನಿಜ ಎಂಬುದು ಗೊತ್ತಾಗಿಲ್ಲ. ಸುಲಿಗೆ ಮಾಡುವ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸಹಜವಾಗಿರುವಾಗ ಇಂಥವುಗಳನ್ನು ಸಾರ್ವಜನಿಕರು ನಂಬುವುದು ಸಾಮಾನ್ಯವಾಗಿರುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin