ತುಮಕೂರು ಜಿಲ್ಲಾ ಎಸ್‍ಪಿಗೆ ಮರಳು ಮಾಫಿಯಾದಿಂದ ಬೆದರಿಕೆ ಕರೆ : ತನಿಖೆ ಚುರುಕು

Lokesh-Kumar------014

ತುಮಕೂರು, ಜೂ.1-ಮರಳು ಸಾಗಾಟಕ್ಕೆ ಅನುವು ಮಾಡಿಕೊಡುವಂತೆ ಮೊಬೈಲ್‍ಗೆ ಬಂದ ಬೆದರಿಕೆಯ ಸಂದೇಶದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರ ವಿಶೇಷ ತಂಡ ತನಿಖೆ ತೀವ್ರಗೊಳಿಸಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‍ಕುಮಾರ್, ಡಿವೈಎಸ್‍ಪಿ ನಾಗರಾಜ್ ಅವರಿಗೆ ಜಿಲ್ಲೆಯಲ್ಲಿ ಮರಳು ಸಾಗಾಟಕ್ಕೆ ಅನುವು ಮಾಡಿಕೊಡಿ.



ಇಲ್ಲದಿದ್ದರೆ ನಿಮ್ಮ ಕುಟುಂಬ ಸದಸ್ಯರ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಮೊಬೈಲ್‍ಗೆ ಬಂದ ಬೆದರಿಕೆಯ ಸಂದೇಶದ ಬೆನ್ನಟ್ಟಿರುವ ಪೊಲೀಸರು ಹಾಗೂ ಜಿಲ್ಲಾ ಅಪರಾಧ ಪತ್ತೆದಳ ಪ್ರತ್ಯೇಕ ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಸಂದೇಶ ಬಂದ ಮೊಬೈಲ್ ನಂಬರ್ ಯಾವ ವ್ಯಕ್ತಿಯದು, ಈ ಕರೆ ಹಿಂದೆ ಯಾರೂ ಇದ್ದಾರೆಂಬ ಹಲವು ಮಾಹಿತಿಗಳನ್ನು ಈ ತಂಡ ಕಲೆ ಹಾಕುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin