ತುಮಕೂರು ವಿವಿಯಿಂದ ಅಮಾನತುಗೊಂಡಿದ್ದ ಭ್ರಷ್ಟ ಅಧಿಕಾರಿ ವಿರುದ್ಧ FIR ?

tumkur-university

ತುಮಕೂರು ,ಆ.24-ತುಮಕೂರಿನ ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಭ್ರಷ್ಟಾಚಾರವೆಸಗಿ ಅಮಾನತುಗೊಂಡಿದ್ದ ಹಣಕಾಸು ಅಧಿಕಾರಿ ಬಿ.ಕೆ.ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಂಡಿಕೇಟ್ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಈ ಸಂಜೆ ಪತ್ರಿಕೆಗೆ ಲಭ್ಯವಾಗಿದೆ.  ತುಮಕೂರು ವಿವಿಯ ಕಚೇರಿ ವಿಭಾಗದಲ್ಲಿ ತುರ್ತು ಸಿಂಡಿಕೇಟ್ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಈ ಹಿಂದೆ ಹಣಕಾಸು ಅಧಿಕಾರಯಾಗಿದ್ದ ಸುರೇಶ್ ವಿರುದ್ಧ ತುಮಕೂರು ವಿವಿಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಇದಕ್ಕೆ ಕೆಲವು ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರಲ್ಲದೆ ಅಂತಿಮ ನಿರ್ಧಾರವನ್ನು ಕುಲಪತಿಗಳು ಕೈಗೊಳ್ಳಲು ಪಟ್ಟು ಹಿಡಿದರು.

ಸಮಗ್ರ ವಿಚಾರಣೆ ಅಗತ್ಯ:

ಹೊರಗುತ್ತಿಗೆ ಆಧಾರದ ಮೇಲೆ ವಿವಿ ಸ್ವಚ್ಛತೆ ನಿರ್ವಹಿಸುವ ಹಾಗೂ ಮಾನವ ಸಂಪನ್ಮೂಲ ಸೇವೆಗೆ ಸಂಬಂಧಿಸಿದಂತೆ ಕ್ಲೀನ್ ಅಂಡ್ ಕೇರ್ ಸಂಸ್ಥೆ ಸೇರಿದಂತೆ ಒಟ್ಟು 5 ಸಂಸ್ಥೆಗಳಿಗೆ ಮೂವರು ವ್ಯಕ್ತಿಗಳಿಗೆ 50,95,490 ರೂ. ಅನಧಿಕೃತ ಬ್ಯಾಂಕ್ ಖಾತೆ ತೆರೆದು ಡಬಲ್ ಪೆಟೆಂಟ್ ಮಾಡಿರುವುದರು ರಾಜ್ಯ ಲೆಕ್ಕ ಪರಿಶೋಧಕ ತನಿಖೆಯಲ್ಲಿ ಪ್ರಕರಣ ಬಯಲಾಗಿತ್ತು.  ಇನ್ನೊಂದು ಗಂಭೀರ ಸ್ವರೂಪದ ಕೃತ್ಯವಾಗಿದ್ದು ಇದರ ಸಮಗ್ರ ವಿಚಾರಣೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಜೂನ್ 23ರಂದು ವಿವಿಧ ಅವ್ಯವಹಾರಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿತ್ತು.
ಸಚಿವರ ಗಮನ ಸೆಳೆದ ಪತ್ರಿಕೆ:

ತುಮಕೂರು ಯೂನಿವರ್ಸಿಟಿಯಲ್ಲಿ ಅನಧಿಕೃತ ಖಾತೆ ತೆರೆದು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ತುಮಕೂರು ಕುಲಪತಿಗಳಾದ ರಾಜಾಸಾಬ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಗಮನಕ್ಕೆ ತರಲಾಯಿತು.  ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಕುಲಪತಿಗಳನ್ನು ಕರೆಸಿ ಹಣ ದುರುಪಯೋಗದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ, ಕೂಡಲೇ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದರು.

ಅಮಾನತು ಶಿಕ್ಷೆ:

ಜಿಲ್ಲೆ ಉಸ್ತುವಾರಿ ಸಚಿವರ ಆದೇಶವನ್ನು ಗಂಭೀರವಾಗಿ ಪರಿಗಣಿಸಿದ ಕುಲಪತಿಗಳು ಸುರೇಶ್ ಅವರನ್ನು ಜೂ.27ರಂದು ಸೇವೆಯಿಂದ ಅಮಾನುತುಗೊಳಿಸಲಾಯಿತು.  ವಿವಿಯಲ್ಲಿ ನಡೆದ ದೊಡ್ಡ ಹಗರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು. ಹಲವು ಸಿಂಡಿಕೇಟ್ ಸದಸ್ಯರು ಸುರೇಶ್ ಅವರ ರಕ್ಷಣೆಗೆ ನಿಂತಿದ್ದರು. ಆದರೆ ಸರ್ಕಾರದ ಆದೇಶ ಹಾಗೂ ತುಮಕೂರು ವಿವಿಯ ಗೌರವವನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಎಫ್‌ಐಆರ್ ದಾಖಲಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುವಂತಾಗಿದೆ.

ಅವ್ಯವಹಾರದ ಮೊತ್ತ:

ವಿವಿಯಲ್ಲಿ ಹಣಕಾಸು ಅಧಿಕಾರಿಯಾಗಿದ್ದ ಬಿ.ಕೆ.ಸುರೇಶ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ನಂಬರ್ 3336813027 ಖಾತೆ ತೆರೆದು ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಡಬಲ್ ಪೇಮೆಂಟ್ ಮಾಡಿರುವುದು ಪತ್ತೆಯಾಗಿತ್ತು.  ಕ್ಲೀನ್ ಅಂಡ್ ಕೇರ್ ಸಂಸ್ಥೆಗೆ 21,38, 139 ರೂ. ಹಣವನ್ನು ಪೇಮೆಂಟ್ ಮಾಡಿದ್ದರು. ಅಪ್ಪು ಡಿಟೆಕ್ಟೀವ್ ಸಂಸ್ಥೆಗೆ 22,94,875 ರೂ. ನವೀನ್ ವುಡ್ಸ್‌ಗೆ 82,665 ರೂ. ಗುರು ಟ್ರಾವೆಲ್ಸ್‌ಗೆ 36,330 ರೂ. ವಿಜಯ ನರ್ಸರಿಗೆ 48,900, ಕುಸುಮ ಅವರಿಗೆ 19 ಸಾವಿರ ರೂ. ವಿಶ್ವನಾಥ್‌ಗೆ 10500, ಮಂಜುಳಾ ಎಂಬುವರಿಗೆ 1,77, 650 ರೂ. ಸೇರಿದಂತೆ ಒಟ್ಟು 50,98,049 ರೂ. ಪಾವತಿಸಿರುವ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿತ್ತು.  ಒಟ್ಟಾರೆ ತುಮಕೂರು ವಿವಿಯಲ್ಲಿ ನಡೆದ ಹಣಕಾಸು ಅವ್ಯವಹಾರ ಸಂಬಂಧಿಸಿದಂತೆ ವಲ್ಲದ ಮನಸಿನಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

► Follow us on –  Facebook / Twitter  / Google+

Sri Raghav

Admin