ತುರುವೇಕೆರೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ : ಅಪಾರ ನಷ್ಟ

Spread the love

tvk
ತುರುವೇಕೆರೆ, ಮೇ 8- ಪಟ್ಟಣ ಸುತ್ತಮುತ್ತ ಅರ್ಧತಾಸಿಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಅಪಾರ ಪ್ರಮಾಣದ ನಷ್ಟವಾಗಿದೆ. ನಿನ್ನೆ ಸಂಜೆ ಆರಂಭಗೊಂಡ ಭಾರಿ ಬಿರುಗಾಳಿ ಸಹಿತದ ಮಳೆಯ ರುದ್ರನರ್ತನಕ್ಕೆ ಮರದ ಕೊಂಬೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯವಾಯಿತು. ಬಸವೇಶ್ವರ ನಗರದಲ್ಲಿ ಬೃಹತ್ ಮರ ಬುಡ ಸಮೇತ ಉರುಳಿದೆ. ಪಟ್ಟಣ ಪಂಚಾಯ್ತಿ ಆವರಣದಲ್ಲಿದ್ದ ಮರವೊಂದು ನೀರಿನ ಘಟಕದ ಮೇಲೆ ಬಿದ್ದಿದ್ದು ಶುದ್ದ ನೀರಿನ ಘಟಕ ಸ್ಥಗಿತಗೊಂಡಿದೆ.ಮುನಿಯೂರು ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟ ಗಂಗನಹಳ್ಳಿ ಗ್ರಾಮದ ಸಿದ್ದೇಗೌಡನ ಮಾವಿನ ಮರದಲ್ಲಿದ್ದ ಸಾವಿರಾರು ಮಾವಿನಕಾಯಿಗಳು ನೆಲಕ್ಕೆ ಬಿದ್ದಿವೆ.  ಸಿದ್ದೇಗೌಡ ಮಾತನಾಡಿ ಅಡಿಕೆ ತೆಂಗು ಮಳೆಯಿಲ್ಲದೆ ನೆಲ ಕಚ್ಚಿದ್ದು ಈಗ ಮಾವಿನ ಫಸಲೂ ಸಹಾ ಕೈಗೆ ಸಿಗದಂತಾಗಿ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ಎಂದರು.  ಶ್ರೀರಾಮಪುರದ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ ಪಾಲಿಹೌಸ್ ಹಾರಿ ಹೋಗಿದೆ, ತೋಟಗಳಲ್ಲಿನ ಅಡಿಕೆ, ತೆಂಗು, ಹಲಸಿನ ಮರಗಳು, ವಿದ್ಯುತ್ ಕಂಬಗಳು  ಧರೆಗುಳಿದಿದ್ದರಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಾಲಿನ ಗ್ರಾಮಗಳಲ್ಲಿ ನಿನ್ನೆ ಸಂಜೆಯವರೆವಿಗೂ ವಿದ್ಯುತ್ ಅಸ್ತವ್ಯಸ್ತಗೊಂಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin