ತೆರೆಗೆ ಪ್ರೇಮ ಬರಹ

prema-1

ಶ್ರೀರಾಮ ಫಿಲಂಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸಿ, ನಿರ್ದೇಶಿಸಿರುವ ಪ್ರೇಮ ಬರಹ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಚಂದನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಐಶ್ವರ್ಯ ಅರ್ಜುನ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ವಿಶ್ವನಾಥ್, ಸುಹಾಸಿನಿ, ಪ್ರಕಾಶ್ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಾಂಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧೃವ ಸರ್ಜಾ ಈ ಚಿತ್ರದ ಹಾಡೊಂದರಲ್ಲಿ ಸ್ನೇಹ ಪೂರ್ವಕವಾಗಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಹೆಚ್.ಸಿ.ವೇಣುಗೋಪಾಲ್ ಅವರ ಛಾಯಾಗ್ರಹಣವಿದೆ. ಕೆಕೆ ಸಂಕಲನ ಮೋಹನ್ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನವಿರುವ  ಈ ಚಿತ್ರಕ್ಕೆ ಶಿವಾರ್ಜುನ್  ಅವರ ನಿರ್ಮಾಣ ನಿರ್ವ ಹಣೆಯಿದೆ.

Sri Raghav

Admin