ತೆಲಂಗಾಣ, ಸೀಮಾಂದ್ರ, ಮತ್ತು ಕರ್ನಾಟಕದಲ್ಲಿ ಜೋರಾಗಿದೆ ‘ಜಾಗ್ವಾರ್’ ಹವಾ

Spread the love

Jaguar-01

ಬೆಂಗಳೂರು, ಅ.13- ಸ್ಯಾಂಡಲ್‍ವುಡ್‍ನಲ್ಲಿ ನಿರೀಕ್ಷೆಯಂತೆ ಬಿಡುಗಡೆಗೊಂಡ ಜಾಗ್ವಾರ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಥಮ ಪ್ರಯತ್ನದಲ್ಲೇ ನಟ ನಿಖಿಲ್ ಕುಮಾರ್ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸಫಲವಾಗಿದ್ದು, ಕರ್ನಾಟಕದ ಎಲ್ಲಾ ಕೇಂದ್ರಗಳಲ್ಲಿ ಬಿಡುಗಡೆಗೊಂಡ ಜಾಗ್ವಾರ್ ಗೆಲುವಿನ ನಗೆ ಬೀರುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ವಿತರಕರಾಗಿ, ಹಂಚಿಕೆದಾರರಾಗಿ, ನಿರ್ಮಾಪಕರಾಗಿ ಯಶಸ್ಸು ಸಾಧಿಸಿದ್ದರು. ಈ ನಿಟ್ಟಿನಲ್ಲಿ ತಮ್ಮ ಪುತ್ರನನ್ನು ಬೆಳ್ಳಿ ಪರದೆ ಮೇಲೆ ತರುವ ಕನಸು ನನಸು ಮಾಡಿಕೊಂಡು ನಿಖಿಲ್ ಕುಮಾರ್‍ಗೆ ಚಲನಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ನಿರ್ದೇಶಕ ಮಹದೇವ್ ಬಹಳ ಅಚ್ಚುಕಟ್ಟಾಗಿ ಸೂಕ್ಷ್ಮ ವಿಚಾರವನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಉತ್ತಮ ಕಥೆಯನ್ನು ನಿಖಿಲ್ ಕುಮಾರ್‍ಗೆ ಸಿದ್ಧಪಡಿಸಿ ಕನ್ನಡ ಚಿತ್ರ ಪ್ರೇಮಿಗಳ ಮನಸ್ಸು ಗೆಲ್ಲಲು ಕಾರಣರಾಗಿದ್ದಾರೆ.

ನಾಯಕಿ ದೀಪ್ತಿಸಾಟಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ತಮನ್ನಾ, ಜಗಪತಿಬಾಬು, ಸಾಧುಕೋಕಿಲ ಸೇರಿದಂತೆ ದೊಡ್ಡ ತಾರಾ ಬಳಗವನ್ನೇ ಹೊಂದಿರುವ ಚಿತ್ರಕ್ಕೆ ಎಸ್.ಎಸ್.ತಮನ್ನಾ ನೀಡಿರುವ ಸಂಗೀತ ಪ್ರೇಕ್ಷಕರನ್ನು ರಂಜಿಸಿದೆ. ಒಟ್ಟಾರೆ ಪ್ರಥಮ ಚಿತ್ರದಲ್ಲೇ ಅಖಿಲ ಕರ್ನಾಟಕ ನಿಖಿಲ್ ಅಭಿಮಾನಿಗಳ ಬಳಗ ಹೊಂದಿರುವ ನವನಟ ನಿಖಿಲ್ ಸ್ಯಾಂಡಲ್‍ವುಡ್‍ನಲ್ಲಿ ಭರವಸೆಯ ನಾಯಕನಾಗಿ ಮಿಂಚಲಿದ್ದಾರೆ. ಈಗಾಗಲೇ ನಿಖಿಲ್ ಚಿತ್ರ ನಿರ್ಮಾಣ ಮಾಡಲು ಹಲವಾರು ನಿರ್ಮಾಪಕರು ಮುಂದೆ ಬಂದಿದ್ದರೂ ಕುಮಾರಸ್ವಾಮಿಯವರು ಇದೇ ಡಿಸೆಂಬರ್‍ನಲ್ಲಿ ಮಗನಿಗಾಗಿ ತಮ್ಮ ಸಂಸ್ಥೆಯಿಂದಲೇ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಒಟ್ಟಾರೆ ಜಾಗ್ವಾರ್ ಹವಾ ಕರ್ನಾಟಕ, ತೆಲಂಗಾಣ ಸೀಮಾಂದ್ರದಲ್ಲಿ ಜೋರಾಗಿ ಬೀಸುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin