ತ್ರಿವಳಿ ತಲಾಕ್ ವಿರುದ್ಧ 10 ಲಕ್ಷ ಮುಸ್ಲಿಮರ ಸಹಿ

Spread the love

Talaq

ನವದೆಹಲಿ, ಮಾ.19-ಮಹತ್ವದ ಬೆಳವಣಿಗೆಯೊಂದರಲ್ಲಿ ವಿವಾದಿತ ತ್ರಿವಳಿ ತಲಾಕ್ ವಿಚ್ಛೇದನದ ವಿರುದ್ಧ ದೇಶಾದ್ಯಂತ ಹತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರು ಸಹಿ ಮಾಡಿದ್ದಾರೆ. ತ್ರಿವಳಿ ತಲಾಕ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಸ್ವಯಂಸೇವಕ (ಆರ್‍ಎಸ್‍ಎಸ್) ಸಂಘದೊಂದಿಗೆ ಗುರುತಿಸಿಕೊಂಡಿರುವ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್‍ಎಂ) ಮುಸ್ಲಿಂ ಸಂಘಟನೆ ಈ ಅಭಿಯಾನ ಆರಂಭಿಸಿದ್ದು ಮಹಿಳೆಯರೂ ಸೇರಿದಂತೆ ಈವರೆಗೆ 10ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಸಹಿ ಮಾಡಿದ್ದಾರೆ.

ತ್ರಿವಳಿ ತಲಾಕ್ ಪದ್ದತಿಯನ್ನು ರದ್ದುಗೊಳಿಸುವಂತೆ ಕೋರಿ ಅನೇಕ ಮುಸ್ಲಿಂ ಮಹಿಳೆಯರು ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಮನವಿ ಸಲ್ಲಿಸಿದ್ದಾರೆ. ಈಗ ಈ ಅಭಿಯಾನಕ್ಕೆ 10 ಲಕ್ಷ ಮಂದಿ ಸಹಿ ಹಾಕಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin