ಥಾಣೆ : ಮೂರಂತಸ್ತಿನ ಕಟ್ಟಡ ಕುಸಿದು ಭಿಕ್ಷುಕ ಸಾವು
ಥಾಣೆ, ನ.18-ಮೂರು ಅಂತಸ್ತುಗಳ ಕಟ್ಟಡವೊಂದು ಕುಸಿತು ಭಿಕ್ಷುಕನೊಬ್ಬ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ವಿದ್ಯುತ್ಮಗ್ಗಗಳ ಪಟ್ಟಣವೆಂದೇ ಹೆಸರಾದ ಭೀವಂಡಿಯ ನಿಜಾಮ್ ನಿಜಾಮಪುರ ಬಡಾವಣೆಯ ಸಮಂತ ಹೆಸರಿನ ಕಟ್ಟಡವು ಮುಂಜಾನೆ 1.30ರಲ್ಲಿ ಕುಸಿದುಬಿದ್ದಿತು. ಕಟ್ಡಡದ ಪಕ್ಕದಲ್ಲಿ ಮಲಗಿದ್ದ ಮಹಮದ್ ಮೊಮಿನ್ (53) ಎಂಬ ಭಿಕ್ಷುಕ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉರುಳಿ ಬಿದ್ದ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದೆ.