ಥೆರೆಸಾ ಮೇ-ನರೇಂದ್ರ ಮೋದಿ ಮಹತ್ವದ ದ್ವಿಪಕ್ಷೀಯ ಮಾತುಕತೆ

MOdi-02

ನವದೆಹಲಿ, ನ.8-ಬ್ರಿಟನ್ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸವನ್ನು ಭಾರತಕ್ಕೆ ಕೈಗೊಂಡಿರುವ ಥೆರೆಸಾ ಮೇ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಾರತಕ್ಕೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿ ಬ್ರಿಟನ್ ನಲ್ಲಿ ಆಶ್ರಯ ಪಡೆದಿರುವ ಆರೋಪಿಗಳಾದ ವಿಜಯ್ ಮಲ್ಯ, ಲಲಿತ್ ಮೋದಿ, ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯನ್ ಮೈಕೆಲ್ ನನ್ನು ವಶಕ್ಕೆ ಒಪ್ಪಿಸಿ ಎಂದು ಹೇಳಿದ್ದಾರೆ.

ಪರಸ್ಪರರ ದೇಶಗಳ ವಶಕ್ಕೆ ಬೇಕಾಗಿರುವ ಆರೋಪಿಗಳ ಪಟ್ಟಿಯನ್ನು ಉಭಯ ದೇಶಗಳೂ ಹಂಚಿಕೊಂಡಿದ್ದು, ಈ ಪೈಕಿ ವಿಜಯ್ ಮಲ್ಯ, ಲಲಿತ್ ಮೋದಿ, ಮೈಕೆಲ್ ಹೆಸರುಗಳಿದ್ದು, ಶೀಘ್ರದಲ್ಲೇ ಭಾರತೀಯ ನ್ಯಾಯಾಂಗವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪರಾರಿಯಾಗಿರುವ ಭ್ರಷ್ಟರು ಮತ್ತು ಅಪರಾಧಿಗಳಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದೆಂಬ ನಿರ್ಧಾರವನ್ನು ಉಭಯ ದೇಶಗಳೂ ಪ್ರಕಟಿಸಿದ್ದು, ಅಪರಾಧಿಗಳನ್ನು ಗಡಿಪಾರು ಮಾಡಲು ಒಪ್ಪಿಕೊಂಡಿವೆ.

ಪ್ರಧಾನಿ ನರೇಂದ್ರ ಮೋದಿ, ಥೆರೆಸಾ ಮೇ ಮಾತುಕತೆಯ ವೇಳೆ ಭಯೋತ್ಪಾದನೆ, ಸಂಘಟಿತ ಅಪರಾಧ, ವೀಸಾ ವಲಸೆ ಸಂಬಂಧ ಭಾರತ ಹಾಗೂ ಬ್ರಿಟನï ಗೃಹ ಸಚಿವಾಲಯದ ಮಟ್ಟದಲ್ಲಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ಇದರ ಪ್ರಕಾರ ಬ್ರಿಟನ್‍ನಲ್ಲಿ ತಲೆಮರೆಸಿಕೊಂಡಿರುವ ವಿಜಯï ಮಲ್ಯ, ಲಲಿತ್ ಮೋದಿ, ಕ್ರಿಶ್ಚಿಯನ್ ಮೈಕೆಲï ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ 60 ಮಂದಿಯನ್ನು ಬ್ರಿಟನ್‍ನಿಂದ ಗಡಿಪಾರು ಮಾಡುವಂತೆ ಭಾರತ ಮನವಿ ಸಲ್ಲಿಸಿದೆ. ಇದೇ ವೇಳೆ ಬ್ರಿತಾನï ಕೂಡ ಭಾರತದಲ್ಲಿರುವ ತನ್ನ ದೇಶದ 17 ಮಂದಿಯನ್ನು ಗಡಿಪಾರು ಮಾಡುವಂತೆ ಭಾರತಕ್ಕೆ ಮನವಿ ಮಾಡಿದೆ. ದ್ವಿಪಕ್ಶೀಯ ಮಾತುಕತೆಯ ಭಾಗವಾಗಿ ಭಾರತ- ಬ್ರಿಟನ್ 83000 ಕೋಟಿ ರೂ ಮೊತ್ತದ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ.

► Follow us on –  Facebook / Twitter  / Google+

Sri Raghav

Admin