ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜೈಷ್ ಉಗ್ರನ ಶವ ಪತ್ತೆ

Terror

ಶ್ರೀನಗರ, ಡಿ.16-ಪಾಕಿಸ್ತಾನದ ನಿಷೇಧಿತ ಭಯೋತ್ಪಾದನೆ ಸಂಘಟನೆ ಜೈಷ್-ಎ-ಮಹಮದ್‍ಗೆ(ಜೆಇಎಂ) ಸೇರಿದ ಉಗ್ರನೊಬ್ಬನ ಸ್ಫೋಟಗೊಂಡ ಶವ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಪೊಲೀಸರಿಗೆ ಪತ್ತೆಯಾಗಿದೆ.  ಖಚಿತ ಸುಳಿವಿನ ಮೇರೆಗೆ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಉಗ್ರಗಾಮಿಯ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿರು. ಅಡಗು ತಾಣವೊಂದರಲ್ಲಿ ರಾಶಿ ಹಾಕಲಾಗಿದ್ದ ಸ್ಫೋಟಕಗಳು ಸಿಡಿದು ಪಾಕಿಸ್ತಾನದ ಈ ಉಗ್ರನು ಹತನಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Sri Raghav

Admin