ದಕ್ಷಿಣ ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ 260ಕ್ಕೂ ಹೆಚ್ಚು ಮಂದಿ ಸಾವು

Columbia

ಬೊಗೊಟಾ, ಏ.2- ಕೊಲಂಬಿಯಾದ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸುಮಾರು 400 ಜನ ಗಾಯಗೊಂಡಿದ್ದಾರೆ. ನೈಸರ್ಗಿಕ ವಿಕೋಪದಲ್ಲಿ ಅನೇಕ ಮನೆಗಳು ನಾಶವಾಗಿದ್ದು, ಹಲವರು ಕಣ್ಮರೆಯಾಗಿದ್ದಾರೆ.  ನೈರುತ್ಯ ಗಡಿ ರಾಜ್ಯ ಪುಟುಮಯೋದಲ್ಲಿ ಭಾರಿ ಮಳೆಯಿಂದ ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ಮನೆಗಳು, ಸೇತುವೆಗಳು, ವಾಹನಗಳು ಮತ್ತು ಮರಗಳು ಕೊಚ್ಚಿಕೊಂಡು ಹೋಗಿವೆ. ಇದರೊಂದಿಗೆ ಸಂಭವಿಸಿದ ಭೂಕುಸಿತಗಳು ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿದೆ.

Columbia-2

ನೀರಿನೊಂದಿಗೆ ಮಣ್ಣಿನರಾಶಿ ಪ್ರಾಂತೀಯ ರಾಜಧಾನಿ ಮೊಕೋದ ಮನೆಗಳು ಮತ್ತು ರಸ್ತೆಗಳಲ್ಲಿ ಶೇಖರಣೆಯಾಗಿದ್ದು, ಇಡೀ ಪ್ರದೇಶದ ಕೆಸರುಮಯವಾಗಿದೆ.
ಈ ನೈಸರ್ಗಿಕ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಕಾರ್ಲೋಸ್ ಇವಾನ್ ಮಾಕ್ರ್ವೆಜ್ ತಿಳಿಸಿದ್ದಾರೆ.  ಅಮೆಜಾನ್ ಜಲಾನಯನ ಪ್ರದೇಶದ ಪಟ್ಟಣದಲ್ಲಿ ಶುಕ್ರವಾರದಿಂದ ಕುಂಭದ್ರೋಣ ಮಳೆ ಸುರಿಯುತ್ತಿದೆ, ಈವರೆಗೆ 260ಕ್ಕೂ ಹೆಚ್ಚು ಮಂದಿ ಮೃತಪಟ್ಟು, 220 ಜನ ನಾಪತ್ತೆಯಾಗಿದ್ದಾರೆ. ನೆರೆಹೊರೆಯ 17 ಪ್ರದೇಶಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಕೊಲಂಬಿಯಾ ರೆಡ್‍ಕ್ರಾಸ್ ಸಂಸ್ಥೆ ಮುಖ್ಯಸ್ಥ ಸೀಸರ್ ಉರುಯಿನಾ ಹೇಳಿದ್ದಾರೆ.

ಇಂಡೋನೆಷ್ಯಾದಲ್ಲಿ 11 ಮಂದಿ ಸಮಾಧಿ :

ಇಂಡೋನೆಷ್ಯಾದ ಪೂರ್ವ ಜಾವಾ ದ್ವೀಪದ ಪೊನೊರೊಗೊ ಗ್ರಾಮದಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ 11 ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಗುಡ್ಡ ಉರುಳಿ ಬಿದ್ದು ಅಪಾರ ಪ್ರಮಾಣದ ಬೆಳೆಗಳೂ ನಾಶವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin