ದಟ್ಟ ಮಂಜು ಕವಿದ ಕಾರಣ ವಾಹನಗಳ ಸರಣಿ ಅಪಘಾತ : ಬರೊಬ್ಬರಿ 55 ಕಾರುಗಳು ನಜ್ಜುಗುಜ್ಜು

Car-Accidnr-ty

ಮಿಚಿಗನ್. ಡಿ.10– ಹೆದ್ದಾರಿ ಯಲ್ಲಿ ದಟ್ಟ ಮಂಜು ಕವಿದ ಕಾರಣ 55ಕ್ಕೂ ಹೆಚ್ಚು ಕಾರುಗಳ ನಡುವೆ ಸರಣಿ ಅಪಘಾತವಾಗಿ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್‍ನ ಲ್ಯಾನ್‍ಸಿಂಗ್ ಬಳಿ ಸಂಭವಿಸಿದೆ. ಇಂಟರ್‍ಸ್ಟೆಟ್-96 (ಐ-96) ಹೆದ್ದಾರಿಯಲ್ಲಿ ಇಂದು ಮುಂಜÁನೆ ದಟ್ಟ ಮಂಜು ಆವರಿಸಿತ್ತು. ಈ ಸಂದರ್ಭದಲ್ಲಿ ಕಾರೊಂದರ ಚಾಲಕ ಅಪಘಾತವೊಂದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ, ಹಿಂದೆ ಬರುತ್ತಿದ್ದ ಕಾರುಗಳು ಮತ್ತು ಇತರ ವಾಹನಗಳು ಒಂದಾದ ಮೇಲೆ ಒಂದರಂತೆ ಪರಸ್ಪರ ಅಪ್ಪಳಿಸಿದವು.

636168003277715121-96crash-dw-0011
ಈ ದುರ್ಘಟನೆಯಲ್ಲಿ ಮೂವರು ಚಾಲಕರು ಮೃತಪಟ್ಟಿ ದ್ದಾರೆ ಎಂದು ಲೀವಿಂಗ್‍ಸ್ಟನ್ ಕೌಂಟಿ ಪೊಲೀಸ್ ಇಲಾಖೆಯ ಲೆಫ್ಟಿನೆಂಟ್ ಎರಿಕ್ ಸ್ಯಾನ್‍ಬಾರ್ನ್ ಹೇಳಿದ್ದಾರೆ. ಈ ಸರಣಿ ಅಪಘಾತದಲ್ಲಿ ಗಾಯಗೊಂಡ 11 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವ ರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಅಪಘಾತದಲ್ಲಿ ಅನೇಕ ವಾಹನಗಳು ಜಖಂ ಗೊಂಡಿದ್ದು, ಕಿಲೋ ಮೀಟರ್‍ಗಳ ತನಕ ಟ್ರಾಫಿಕ್ ಜಾ ಮ್ ಆಗಿತ್ತು. ಡೆಟ್ರಾಯಿಟ್ ಪ್ರದೇಶದ ಫ್ರೀವೇಗಳಲ್ಲೂ ಇದೇ ರೀತಿಯ ಸರಣಿ ಅಪಘಾತಗಳು ಸಂಭವಿಸಿದ ವರದಿಗಳಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

636168003395653389-96crash-dw-0015

Accident

Sri Raghav

Admin