ದಡಾರ-ರುಬೆಲ್ಲಾ ಲಸಿಕೆ ಜಾಗೃತಿ ಅಭಿಯಾನ

8

ಕಲಘಟಗಿ,ಫೆ.7– 2020ರ ವೇಳೆಗೆ ಭಾರತವನ್ನು ದಡಾರ-ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿಸುವ ಸರ್ಕಾರದ ಉದ್ದೇಶ ಸಪಲಗೊಳಿಸುವುದು ಎಲ್ಲ ಪಾಲಕರ ಆದ್ಯ ಕರ್ತವ್ಯ. ಎಲ್ಲರು ತಮ್ಮ ಮಕ್ಕಳಿಗೆ ಎಂಆರ್ ಲಸಿಕೆ ಹಾಕಿಸಿ ಮುಂದಿನ ದಿನಮಾನದಲ್ಲಿ ದೇಶಕ್ಕೆ ಸಧೃಡ ಯುವಕರನ್ನು ನೀಡಿದರೆ ದೇಶಕ್ಕೆ ನೀವು ನೀಡಿದ ಅತಿ ದೊಡ್ಡ ಕಾಣಿಕೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರಧಾನ ಗುರು ಎಮ್‍ಪಿ ಪರ್ವತಗೌಡ್ರ ಹೇಳಿದರು.ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾಪ್ಲಾಟ್ ಜಂಟಿಯಾಗಿ ದಡಾರ-ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ಪಡೆಯಲು 9 ತಿಂಗಳಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಅಭಿಯಾನ ಹಮ್ಮಿಕೊಂಡಿದ್ದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳೊಡನೆ ಪಥಸಂಚಲನ ಮುಖಾಂತರ ಎಂಆರ್ ಲಸಿಕೆ ಹಾಕಿಸುವಂತೆ ಅವರು ತಿಳಿಸಿದರು.  ಈ ಸಂದರ್ಭದಲ್ಲಿ ಶಿಕ್ಷಕರಾದ ಪಿ.ಆರ್ ಪಮ್ಮಾರ, ಎಸ್.ಎಸ್ ಹಿರೇಗೌಡರ, ಕೆ.ಕೆ ಪಾಟೀಲ್, ಹಿರಿಯ ಮಹಿಳಾ ಆರೋಗ್ಯೆ ಸಹಾಯಕಿ ಜ್ಯೋತಿ ಎಂ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪಂಕಜ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin