ದರ್ಶನ್ ಮತ್ತು ಸುದೀಪ್ ನಡುವೆ ಮತ್ತೇನಾಯ್ತು..?

Sudeep--and-Darshan

ಬೆಂಗಳೂರು.ಮಾ. 05 : “ನಾನು ಮತ್ತು ಸುದೀಪ್ ಸ್ನೇಹಿತರಾಗಿ ಉಳಿದಿಲ್ಲ. ನಾವಿಬ್ಬರೂ ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುತ್ತಿರುವ ನಟರಷ್ಟೇ. ಮತ್ಯಾವುದೇ ಊಹಾಪೋಹಗಳು ಬೇಡ. ಇಲ್ಲಿದೆ ಇದು ಸಾಕು” ಎಂದು ದರ್ಶನ್ ತೂಗುದೀಪರ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಈಗ ಈ ಇಬ್ಬರ  ಅಭಿಮಾನಿಗಳ ನಡುವೆ ಭಾರಿ ಚರ್ಚೆಗ ಗ್ರಾಸವಾಗಿದೆ.

ಬಹಳ ದಿನಗಳಿಂದ ಹೊಗೆಯಾಡುತ್ತಿದ್ದ ಸುದ್ದಿ ಮತ್ತು ಆತಂಕವೊಂದು ನಿಜವಾದಂತಿದೆ. ಸ್ಯಾಂಡಲ್ವುಡ್’ನ ಕುಚುಕು ಸ್ನೇಹಿತರೆಂದೇ ಕರೆಯಲ್ಪಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸ್ನೇಹ ಮುರಿದುಬಿದ್ದಿದೆ ಎಂಬುದು ಈ ಮೂಲಕ ಸ್ಫಪಿಷ್ಟವಾದಂತೆ ಕಾಣಿಸುತ್ತದೆ. ದರ್ಶನ್ ತೂಗುದೀಪ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿನ  ಈ ಟ್ವೀಟ್ ಈಗ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ ನಡುವೆ ಇನ್ನಿಲ್ಲದಂತೆ ಚರ್ಚೆಯಾಗುತ್ತಿದೆ.


ದರ್ಶನ್ ಮತ್ತು ಸುದೀಪ್ ಮಧ್ಯೆ ಈಗ್ಗೆ ಹಲವು ದಿನಗಳಿಂದ ಶೀತಲ ಸಮರವಿತ್ತೆಂಬ ಮಾತು ಸ್ಯಾಂಡಲ್ವುಡ್’ನಲ್ಲಿ ಹರಿದಾಡುತ್ತಿತ್ತು. ಯಾವುದೇ ಸಮಾರಂಭಗಳಾಗಲಿ, ಕಾರ್ಯಕ್ರಮಗಳಾಗಲಿ ಈ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ದರ್ಶನ್ ಟ್ವೀಟ್ ಈ ನಟರಿಬ್ಬರ ಮಧ್ಯೆ ಯಾವುದು ಸರಿ ಇಲ್ಲ ಎಂದು ತೋರಿಸುತ್ತಿದೆ.

ನಾನು, ಸುದೀಪ್ ಸ್ನೇಹಿತರಲ್ಲ ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಕುರಿತು ಇಬ್ಬರೂ ನಟರು ಪ್ರತಿಕ್ರಿಯೆ ನೀಡಿಲ್ಲ.
ದರ್ಶನ್ ಹಾಗೂ ಸುದೀಪ್ ಸ್ನೇಹಿತರಾಗಿದ್ದಾರೆ. ದರ್ಶನ್ ಅವರ ಹೆಸರಲ್ಲಿ 3-4 ಟ್ವಿಟರ್ ಖಾತೆಗಳಿದ್ದು, ಹ್ಯಾಕ್ ಮಾಡಿ ಹೀಗೆ ಮೆಸೇಜ್ ಪೋಸ್ಟ್ ಮಾಡಿರಬಹುದೆಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin