ದಸರಾ ಗೋಲ್ಡ್ ಕಾರ್ಡ್‍ಗಳು ರೆಡಿ, ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

Dasara--01

ಮೈಸೂರು, ಸೆ.2- ಈ ಬಾರಿಯ ದಸರಾಕ್ಕಾಗಿ ಗೋಲ್ಡ್ ಕಾರ್ಡ್‍ಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಒಬ್ಬರಿಗೆ 2,999ರೂ. ನಿಗದಿಪಡಿಸಲಾಗಿದೆ. ಗೋಲ್ಡ್‍ಕಾರ್ಡ್‍ಅನ್ನು ಆನ್‍ಲೈನ್‍ನಲ್ಲೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಮೈಸೂರು ದಸರಾ ವೆಬ್‍ಸೈಟ್ ಅಥವಾ bookmyshow ಮೂಲಕ ಗೋಲ್ಡ್‍ಕಾರ್ಡ್ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

ಈ ಕಾರ್ಡ್ ಪಡೆದವರು ಮೈಸೂರು ಅರಮನೆ, ಮೃಗಾಲಯ, ಹಾರಂಗಿ ಕೆರೆ, ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನ, ಜಗನ್‍ಮೋಹನ ಅರಮನೆ, ಶ್ರೀರಂಗಪಟ್ಟಣದ ರಂಗನತಿಟ್ಟು, ಪಕ್ಷಿಧಾಮ ಸೇರಿದಂತೆ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳನ್ನು ಸಹ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

Sri Raghav

Admin