ದಾಖಲಾತಿ ನೀಡಿ ಬೈಕ್ ಪಡೆದುಕೊಳ್ಳಿ

ಮೈಸೂರು,ನ.29- ವಿವಿಧ ಪ್ರಕರಣಗಳಗೆ ಸಂಬಂಧಿಸಿದಂತೆ ಕಳುವಾಗಿದ್ದ 50 ದ್ವಿಚಕ್ರ ವಾಹನಗಳನ್ನು ದೇವರಾಜ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈಗಾಗಲೇ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಕಳವುವಾಗಿದ್ಧ ವಾಹನ ಮಾಲೀಕರು ಮೂಲ ದಾಖಲಾತಿಗಳನ್ನು ನೀಡಿ ಪಡೆದುಕೊಳ್ಳಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.ಕಳವು ಆಗಿದ್ದ ವಾಹನಗಳ ಮಾಹಿತಿಯನ್ನು ಠಾಣೆಯ ನೋಟಿಸ್ ಬೋರ್ಡ್‍ಗೆ ಹಾಕಲಾಗಿದ್ದು, 10 ದಿನಗಳಗೆ ಬಂದು ಸೂಕ್ತ ದಾಖಲೆಗಳನ್ನು ನೀಡಿ ವಾಹನಗಳನ್ನು ಬಿಡಿಸಿಕೊಳ್ಳಬೇಕೆಂದು ಇನ್ಸ್‍ಪೆಕ್ಟರ್ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin