ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 60 ಲಕ್ಷ ರೂ. ನಗದು ವಶ

Black-Money--01

ವಿಜಯಪುರ, ಏ.8-ಚುನಾವಣಾಧಿಕಾರಿಗಳ ತಪಾಸಣೆ ವೇಳೆ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 60 ಲಕ್ಷ ರೂ. ನಗದು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಇಂಡಿ ಬೈಪಾಸ್ ರಸ್ತೆ ಬಳಿ ಅಲಮೇಲ ಪಟ್ಟಣದಿಂದ ವಿಜಯಪುರಕ್ಕೆ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಲಮೇಲದ ಬ್ಯಾಂಕ್‍ವೊಂದಕ್ಕೆ ಸೇರಿದ ಹಣ ಇದು ಎಂದು ಹೇಳಲಾಗಿದೆ. ಆದರೆ ಯಾವುದೇ ಭದ್ರತೆ ಇಲ್ಲದೆ ಹಣ ಸಾಗಣೆ ಮಾಡಲಾಗಿದ್ದು, ಇದಕ್ಕಾಗಿ ಖಾಸಗಿ ಕಾರನ್ನು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರು ಹಾಗೂ ಹಣವನ್ನು ವಶಪಡಿಸಿಕೊಂಡಿರುವ ಚುನಾವಣಾಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಟಿಪ್ಪರ್ ವಶ: ಚುನಾವಣಾಧಿಕಾರಿಗಳ ತಪಾಸಣೆ ವೇಳೆಯೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಜಲ್ಲಿಕಲ್ಲು ತುಂಬಿದ ಟಿಪ್ಪರ್‍ನ್ನು ವಶಪಡಿಸಿಕೊಳ್ಳಲಾಗಿದೆ. ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ ಕ್ರಾಸ್ ಬಳಿ ನಿರ್ಮಿಸಿದ್ದ ಚುನಾವಣಾ ಚೆಕ್‍ ಪೋಸ್ಟ್ ಸಮೀಪ ಟಿಪ್ಪರ್‍ನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾಧಿಕಾರಿಗಳು ಟಿಪ್ಪರ್ ನಿಲ್ಲಿಸಿಪರಿಶೀಲನೆಗೆ ಮುಂದಾದಾಗ ಚಾಲಕ ವಿಠ್ಠಲ್ ಸಿಂಧೆ ವಾಹನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sri Raghav

Admin