‘ದಾದಾ ಈಸ್ ಬ್ಯಾಕ್’
ಕೆಲವೇ ವರ್ಷಗಳ ಹಿಂದೆ ‘ಗೊಂಬೆಗಳ ಲವ್’ ಎನ್ನುವ ಚಿತ್ರವೊಂದು ತೆರೆಗೆ ಬಂದಿತ್ತು. ಯಾವ ನಿರೀಕ್ಷೆಯೂ ಇಲ್ಲದೆ ಬಿಡುಗಡೆಯಾಗಿದ್ದ ಸಿನಿಮಾ ರಿಲೀಸ್ ಆದ ನಂತರ ಕನ್ನಡದ ಪ್ರೇಕ್ಷಕರು ಮತ್ರವಲ್ಲದೆ, ಜಗತ್ತಿನಾದ್ಯಂತ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು. ಮೊದಲ ಚಿತ್ರದಲ್ಲೇ ಕ್ರಿಯಾಶೀಲ ನಿರ್ದೇಶಕ ಎಂದು ಹೆಸರು ಮಾಡಿದ್ದ ಸಂತೋಷ್ ತಮ್ಮ ಎರಡನೇ ಚಿತ್ರವನ್ನು ಸಂಪೂರ್ಣ ಗೊಳಿಸಿದ್ದಾರೆ. ಇನ್ನೇನು ತೆರೆಗೆ ಬರಲು ಅಣಿಯಾಗಿರುವ ಈ ಚಿತ್ರದ ಟೀಸರ್ ಅನ್ನು ಕಿಚ್ಚ ಸುದೀಪ್ ಇತ್ತೀಚೆಗೆ ಟೌನ್ ಹಾಲ್ ಆವರಣದಲ್ಲಿ ಬಿಡುಗಡೆ ಗೊಳಿಸಿದ್ದರು. ದಾದಾ ಅಂದ ಕೂಡಲೇ ನಮ್ಮ ತಲೆಗೆ ಬರೋದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರು. ಅವರ ಆಶೀರ್ವಾದ ಕೂಡ ಸಿಕ್ಕರೆ ಸಿನಿಮಾ ದೊಡ್ಡ ಹೆಸರು ಮಾಡೋದರಲ್ಲಿ ಸಂಶಯವಿಲ್ಲ. ಈ ಚಿತ್ರದ ಟ್ರೇಲರ್ ನೋಡಿದರೆ ಅದು ಖಂಡಿತಾ ಸಾಧ್ಯವಾಗುತ್ತದೆ ಅನ್ನೋ ನಂಬಿಕೆ ನನಗಿದೆ ಎಂದು ‘ದಾದಾ ಈಸ್ ಬ್ಯಾಕ್’ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು.
ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ ಆರ್.ವಿ.ಯುವರಾಜ್, ನಿರ್ಮಾಪಕ ಕನಕಪುರ ಆರ್.ಶ್ರೀನಿವಾಸ್ ಮತ್ತು ಬಿಗ್ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ಚಿತ್ರದಲ್ಲಿ ಅರುಣ್ ನಾಯಕನಾಗಿ ಶ್ರಾವ್ಯ ನಾಯಕಿಯಾಗಿ ಅಭಿನಯಿಸಿದ್ದು, ಶರತ್ ಲೋಹಿತಾಶ್ವ ಹಾಗೂ ವಿಶೇಷ ಪಾತ್ರದಲ್ಲಿ ತಮಿಳು ನಟ ಪಾರ್ತಿಬನ್ ನಟಿಸಿದ್ದಾರೆ. ಅನುಪ್ ಸೀಳೀನ್ ಸಂಗೀತವಿರುವ ಈ ಚಿತ್ರವನ್ನು ಡಾ.ಶಂಕರ್, ಅಜಯ್ ರಾಜ್ ಅರಸ್ ನಿರ್ಮಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >