ದಾವೂದ್ ಆಸ್ತಿ ಜಪ್ತಿಗೆ ಕಾರಣವಾದ ಮೋದಿ ಮಾಸ್ಟರ್ ಸ್ಟ್ರೋಕ್
ನವದೆಹಲಿ, ಜ.5-ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ಸ್ಟ್ರೋಕ್ನಿಂದ ಮುಂಬೈ ಸರಣಿ ಸೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ 15,000 ಕೋಟಿ ರೂಮೌಲ್ಯದ ಆಸ್ತಿ ಪ್ತಾಸಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜಫ್ತಿ ಮಾಡಲು ಕಾರಣ ವಾಗಿದೆ ಎಂದು ಬಿಜೆಪಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಪ್ರಶಂಸೆಗಳ ಸುರಿಮಳೆಗರೆದಿದೆ. ಮೋದಿಯವರ ಮಹತ್ವದ ರಾಜತಾಂತ್ರಿಕ ಯಶಸ್ಸು ಇದಾಗಿದೆ ಎಂದು ಬಿಜೆಪಿ ಟ್ವೀಟ್ನಲ್ಲಿ ಬಣ್ಣಿಸಿದೆ.
ಸರಣಿ ಬಾಂಬ್ ಸೋಟದ ಮೂಲಕ ಮುಂಬೈನಲ್ಲಿ ಭೀಕರ ಮಾರಣಹೋಮ ನಡೆಸಿದ್ದ ದಾವೂದ್ ಸದ್ದಡಗಿಸುವ ಪ್ರಯತ್ನದಲ್ಲಿ ಮೋದಿ ಸರ್ಕಾರ ದೊಡ್ಡ ಮಟ್ಟದ ಯಶಸ್ಸು ಸಾಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಕೇಂದ್ರ ಕಳೆದ ವರ್ಷ ಸಲ್ಲಿಸಿದ್ದ ಭೂಗತ ಪಾತಕಿಯ ಆಸ್ತಿಗಳ ವಿವರ ಪಟ್ಟಿಯ ಮೇಲೆ ತನಿಖೆ ಕೈಗೊಂಡ ಯುಎಇ ಸರ್ಕಾರ ದಾವೂದ್ಗೆ ಸೇರಿದ 15,000 ಕೋಟಿ ರೂ. ಮೌಲ್ಯ ಹೋಟೆಲ್ಗಳು, ಷೇರುಗಳು, ಗೋಲ್ಡ್ ಬಾಕ್ಸ್ ಕಂಪನಿ ಸೇರಿದ ಆಸ್ತಿಗಳನ್ನು ಮುಟು ಗೋಲು ಹಾಕಿಕೊಂಡಿದೆ ಎಂದು ಮಾಧ್ಯಮ ವರದಿಗಳನ್ನು ಬಿಜೆಪಿ ಉಲ್ಲೇಖಿಸಿ ಮೋದಿ ಸಾಧನೆಯನ್ನು ಪ್ರಶಂಸಿಸಿದೆ.