ದುಡ್ಡಿದೆ ಎಂದು ಬ್ಯಾಗ್ ತೆಗೆದು ನೋಡಿದ ಸ್ಥಳೀಯರಿಗೆ ಶಾಕ್..! ಹಾಗಾದರೆ ಆ ಬ್ಯಾಗ್’ನಲ್ಲೇನಿತ್ತು.?

money--nbox

ತಿಪಟೂರು.ಅ.5- ತಾಲ್ಲೂಕಿನ ಹೊನ್ನವಳ್ಳಿ ರೈಲ್ವೇ ನಿಲ್ದಾಣದ ಬಳಿ ಕಾರೋಂದರಲ್ಲಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಹಣದ ವ್ಯವಹಾರ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು ಕಾರಿನ ಬಳಿ ಹೋದಾಗ ಹಣ ತುಂಬಿದ್ದ ಬ್ಯಾಗ್ ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ತಡ ರಾತ್ರಿ ನಡೆದಿದೆ.ಹೊನ್ನವಳ್ಳಿ ರೈಲ್ವೇ ನಿಲ್ದಾನ ಬಳಿಯಲ್ಲಿ ಅಪರಿಚಿತ ಕಾರೋಂದರಲ್ಲಿ ಕೆಲ ವ್ಯಕ್ತಿಗಳು ಜೋರಾಗಿ ಹಣದ ವ್ಯವಾಹಾರದ ಬಗ್ಗೆ ಮಾತನಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕಾರಿನ ಬಳಿಗೆ ಕೆಲ ಸ್ಥಳೀಯ ನಿವಾಸಿಗಳು ಹೋದಂತಹ ಸಂದರ್ಭದಲ್ಲಿ ಗಾಬರಿಗೊಂಡು ಹಣದ ಬ್ಯಾಗ್‍ಗನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಬ್ಯಾಗ್ ತೆಗೆದು ನೋಡಿದ ಸ್ಥಳೀಯರಿಗೆ ಶಾಕ್  ಕಾದಿದ್ದತು. ಬ್ಯಾಗ್‍ನಲ್ಲಿ ಪೆಟ್ಟಿಗೆ ಇದ್ದು ಆ ಪೆಟ್ಟಿಗೆಯ ಮೇಲ್ಬಾಗದಲ್ಲಿ 500 ರೂಗಳ ನೋಟುಗಳು ಕಂಡವು.ಆ ಪೆಟ್ಟಿಗೆಯ ಗಾತ್ರ ನೋಡಿದ ಸ್ಥಳೀಯರು ಸುಮಾರು 1.50ಯಿಂದ 2 ಕೋಟಿ ಹಣವಿರಬಹುದೆಂದು ಊಹಿಸಿ ಕೂಡಲೇ ಸ್ಥಳೀಯ ಹೊನ್ನವಳ್ಳಿ ಠಾಣೆಗೆ ಮಾಹಿತಿ ತಿಳಿಸಿದರು. ಆಗ ಸ್ಥಳಕ್ಕೆ ಆಗಮಿಸಿದ ಪೊಲಿಸ್ ಅಧಿಕಾರಿಗಳು ಎಲ್ಲರ ಸಮ್ಮುಖದಲ್ಲಿಯೇ ವೀಡಿಯೋ ಮಾಡುವ ಮುಖಾಂತರ ಪೆಟ್ಟಿಗೆಯನ್ನು ತೆರೆದಿದ್ದಾರೆ. ಆಗ ಕೇವಲ ಮೇಲ್ಬಾಗದ 4 ನೋಟುಗಳು ಮಾತ್ರ ಹಣವಾಗಿದ್ದು ಉಳಿದಿದ್ದು ಬರಿ ದಿನಪತ್ರಿಕೆಯನ್ನು ತುಂಬಿಸಿದ್ದರು. ಆಗ ಪೊಲಿಸರು ಯಾರೋ ಬೇಕೆಂದೇ ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

 

► Follow us on –  Facebook / Twitter  / Google+

Sri Raghav

Admin