ದುಬಾರಿ ಬೆಲೆ ವಾಣಿಜ್ಯ ಮಳಿಗೆ : ಜನರ ಅಚ್ಚರಿ

chikkamangaluru-2

ಕಡೂರು, ಫೆ.15- ಇತಿಹಾಸದಲ್ಲೇ ಪ್ರಥಮವೆನಿಸಿದ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಇಡೀ ಪಟ್ಟಣವನ್ನು ಬೆಚ್ಚಿ ಬೀಳಿಸುವ ದುಬಾರಿ ಬೆಲೆಗೆ ಹರಾಜಾಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.ಪುರಸಭೆ ಅನುದಾನದಲ್ಲಿ ಕಟ್ಟಿಸಿರುವ 45 ಮಳಿಗೆಗಳಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಬಾಡಿಗೆದಾರರು ಠಿಕಾಣಿ ಹೂಡಿ ಬರುವ ಎಲ್ಲಾ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಮುಂದುವರೆಯುತ್ತಾ ಬಂದಿದ್ದರು. ಆದರೆ ಪುರಸಭೆ ಅಧ್ಯಕ್ಷ ಎಂ. ಮಾದಪ್ಪ ಇವರ ದಿಟ್ಟ ನಿರ್ಧಾರ ಬಾಡಿಗೆದಾರರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಬಾಡಿಗೆದಾರರು ಕೋರ್ಟ್ ಮೊರೆ ಹೋಗಿದ್ದರೂ ಹಲವಾರು ಒತ್ತಡಗಳು ಬಂದರೂ ಯಾವುದಕ್ಕೂ ಮಣಿಯದೆ ಕ್ಷೇತ್ರದ ಶಾಸಕರ ಹಾಗೂ ಎಲ್ಲಾ 23 ಸದಸ್ಯರ ಸಂಪೂರ್ಣ ಸಹಕಾರ ಪಡೆದು ಪೊಲೀಸರ ಸೂಕ್ತ ಬಂದೋಬಸ್ತಿನಲ್ಲಿ ಹರಾಜು ಪ್ರಕ್ರಿಯೆ ನಡೆಸಿಯೇ ಬಿಟ್ಟರು. ಹರಾಜು ಪ್ರಕ್ರಿಯೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ವಿಶೇಷವಾಗಿತ್ತು.
ಪುರಸಭಾ ಅಧ್ಯಕ್ಷ ಎಂ. ಮಾದಪ್ಪಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಸುತ್ತೋಲೆಯ ಪ್ರಕಾರ ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ಸದಸ್ಯರ ಸಹಕಾರ ಪಡೆದು ಹಲವಾರು ಅಡೆತಡೆಗಳ ನಡುವೆಯೂ ಯಾವುದೇ ಪ್ರಭಾವಕ್ಕೆ ಮಣಿಯದೆ ಸಾರ್ವಜನಿಕರ ಆಸ್ತಿಯನ್ನು ಸಾರ್ವಜನಿಕರಿಗಾಗಿ ಉಳಿಸಲಾಗಿದೆ.

ಎರಡನೇ ಹಂತದಲ್ಲಿ ಐಡಿಎಸ್‍ಎಂಪಿ ಯೋಜನೆಯಡಿ ನಿರ್ಮಾಣಗೊಂಡಿರುವ ಮಳಿಗೆಗಳ ಹರಾಜನ್ನು ಕೆಲವೇ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.45 ಮಳಿಗೆಗಳಿಗೆ ಹರಾಜು ನಡೆಸುವ ಉದ್ದೇಶವನ್ನು ಹೊಂದಲಾಗಿತ್ತು. 3 ಮಳಿಗೆಗಳ ಬಾಡಿಗೆದಾರರು ಕೋರ್ಟ್ ಆದೇಶ ಪಡೆದಿರುವುದರಿಂದ ಅವುಗಳನ್ನು ಹೊರತುಪಡಿಸಿ 42 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಂದರು.  ಪುರಸಭಾ ಉಪಾಧ್ಯಕ್ಷ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಬಷೀರ್‍ಸಾಬ್, ಮುಖ್ಯಾಧಿಕಾರಿ ಮಂಜುನಾಥ್ ಎಲ್ಲಾ ಸದಸ್ಯರುಗಳು ಹಾಗೂ ನೌಕರ ವರ್ಗ, ಕಾರ್ಮಿಕ ವರ್ಗ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin