ದುಷ್ಕರ್ಮಿಗಳು ಸಿಡಿಸಿದ ಪಟಾಕಿಗೆ ದ್ವಿಚಕ್ರ ವಾಹನ, ವಸ್ತುಗಳು ಭಸ್ಮ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆಜಿಎಫ್, ಅ.22-  ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿಯಿಂದ ಪಟಾಕಿ ಸಿಡಿದು ದ್ವಿಚಕ್ರ ವಾಹನ ಸೇರಿದಂತೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಂ.ರಸ್ತೆ ನಿವಾಸಿ ಮನೋಜ್‍ಕೊಚೇಟಾ ಎಂಬುವರ ಮನೆಯಲ್ಲಿ  ಬೆಂಕಿ ಕಾಣಿಸಿಕೊಂಡಿದ್ದು, ಮನೆ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ, ಫರ್ನಿಚರ್ಸ್ ಸೇರಿದಂತೆ ಸುಮಾರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ರಾತ್ರಿ ಗಸ್ತುನಲ್ಲಿದ್ದ ಪೊಲೀಸರÀ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮನೆ ಮಾಲೀಕ  ಅಳವಡಿಸಿದ್ದ ಸಿಸಿಟಿವಿ ಫುಟೇಜ್‍ಗಳನ್ನು ಪರಿಶೀಲಿಸಿ ನೋಡಿದಾಗ ಮೂವರು ದುಷ್ಕರ್ಮಿಗಳು ಮನೆ ಮುಂದೆ ಪಟಾಕಿ ಸಿಡಿಸುತ್ತಿದ್ದ ಇಬ್ಬರು ಬಾಲಕರಿಂದ ಪಟಾಕಿಯನ್ನು ಪಡೆದುಕೊಂಡು ಮನೆಯೊಳಗೆ ಎಸೆದಿರುವ ದೃಶ್ಯ ಕಂಡು ಬಂದಿದೆ.

Sri Raghav

Admin