ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಸಂಭ್ರಮದ ರಾಜ್ಯೋತ್ಸವ
ನವದೆಹಲಿ, ನ.1– ರಾಷ್ಟ್ರರಾಜಧಾನಿಯ ಕರ್ನಾಟಕ ಭವನದಲ್ಲಿಂದು ಬೆಳಗ್ಗೆ ಸಂಭ್ರಮದಿಂದ 61ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಭವನದ ಸುತ್ತಮುತ್ತ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಆಯುಕ್ತ ಅತುಲ್ಕುಮಾರ್ಥಿವಾರಿ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಸಹಾಯಕ ಆಯುಕ್ತರಾದ ಅನೀಸ್ ಕೆ.ಜಾಯ್ ಸೇರಿದಂತೆ ಕರ್ನಾಟಕ ಭವನದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕುಟುಂಬದವರು ಈ ವೇಳೆ ಪಾಲ್ಗೊಂಡಿದ್ದರು.