ದೆಹಲಿಯಲ್ಲಿ ಶಂಕಿತನ ಸೆರೆ : 30 ಪಿಸ್ತೂಲ್, ಸ್ಟೇನ್‍ಗನ್ ವಶ

Spread the love

Delhi--01

ನವದೆಹಲಿ, ಏ.22- ರಾಜಧಾನಿ ದೆಹಲಿಯ ನಿಜಾಮುದ್ದೀನ್ ಸೇತುವೆ ಬಳಿ ಶಂಕಿತನೊಬ್ಬನನ್ನು ಬಂಧಿಸಿದ ದೆಹಲಿ ಪೊಲೀಸರು 30 ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್‍ಗಳು, ಒಂದು ಕಾರ್ಬೈನ್ (ಸ್ಟೇನ್‍ಗನ್) ಹಾಗೂ ಮದ್ದುಗುದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.   ಸೇತುವೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಜ್‍ಪಾಲ್ ಎಂಬಾತನನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿ ಪರಿಶೀಲಿಸಿದಾಗ ಅಕ್ರಮ ಶಸ್ತ್ರಾಸ್ತಗಳು ಮತ್ತು ಲೈವ್ ಕಾರ್ಟಿಡ್ಜ್‍ಗಳು ಪತ್ತೆಯಾದವು. ಅನ್ಯ ಸ್ಥಳದಿಂದ ದೆಹಲಿಗೆ ಆಗಮಿಸಿದ ಆತ ಇಬ್ಬರಿಗೆ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲು ಹವಣಿಸುತ್ತಿದ್ದ. ಬಂಧಿತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದ ಮತ್ತಷ್ಟು ಸಂಪರ್ಕಗಳು ಬೆಳಕಿಗೆ ಬರಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin