ದೆಹಲಿ, ಲಖನೌ ಮೇಲೆ ದಟ್ಟ ಮಂಜು : ವಿಮಾನ, ರೈಲು ಸಂಚಾರ ವ್ಯತ್ಯಯ

Train-Fog

ನವದೆಹಲಿ, ಡಿ.8-ರಾಜಧಾನಿ ನವದೆಹಲಿ, ಉತ್ತರ ಪ್ರದೇಶದ ಲಖನೌ ಸೇರಿದಂತೆ ದೇಶದ ಕೆಲವಡೆ ದಟ್ಟ ಮಂಜು ಆವರಿಸಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಜಿನ ತೆರೆ ಆವರಿಸಿರುವುದರಿಂದ ವಿಮಾನಗಳ ಹಾರಾಟ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.  ರಕ್ತ ಹೆಪ್ಪುಗಟ್ಟಿಸುವ ಚಳಿಯ ಥಂಡಿ ವಾತಾವರಣದಿಂದ ಸಾಮಾನ್ಯ ಜನಜೀವನ ಏರುಪೇರಾಗಿದೆ. ರಾಜಧಾನಿಯ ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ. ಮಧ್ಯಾಹ್ನದ ನಂತರ ಮಂಜಿನ ತೆರೆ ಸರಿದರೂ, ಸಂಜೆಯಾಗುತ್ತಲೇ ಮತ್ತೆ ಮಂಜು ಆವರಿಸಿಕೊಳ್ಳುತ್ತಿದೆ.

ಕಳೆದ ಐದು ದಿನಗಳಿಂದಲೂ ದೆಹಲಿಯಲ್ಲಿ ಮುಂಜಾನೆಯಿಂದ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನಗಳು ಮತ್ತು ರೈಲುಗಳ ಸಂಚಾರ ವಿಳಂಬವಾಗುತ್ತಿದೆ. ಅಲ್ಲದೇ ಹೆದ್ದಾರಿಗಳ ಮೇಲೂ ದಟ್ಟ ಮಂಜು ಕವಿದಿರುವುದರಿಂದ ವಾಹನಗಳ ಸುಗಮ ಪ್ರಯಾಣಕ್ಕೂ ಅಡಚಣೆಯಾಗಿದೆ. ಉತ್ತರಪ್ರದೇಶದ ಲಕ್ನೋ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲೂ ಜನ ಚಳಿಯಿಂದ ನಡುಗುತ್ತಿದ್ದಾರೆ.

ಕಾಶ್ಮೀರ ವರದಿ:

ಕಣಿವೆ ರಾಜ್ಯ ಕಾಶ್ಮೀರವೂ ಅಕ್ಷರಶ: ಮಂಜಿನ ಲಕೋಟೆಯೊಳಗೆ ಹುದುಗಿ ಹೋಗಿದೆ. ತಾಪಮಾನ ತೀವ್ರವಾಗಿ ಕುಸಿದಿದ್ದು, ಜನರು ಮನೆಯೊಳಗೆ ಬೆಚ್ಚಗೆ ಬಂಧಿತರಾಗಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin