ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಯೋಧರ ಕೆಲಸ ಶ್ಲಾಘನೀಯ : ನಟ ಶ್ರೀನಾಥ್

Spread the love

Srinath-01

ಯಲಹಂಕ,ಅ.21-ಕಲಾವಿದರು ನಟನೆಯಿಂದ ಜನರಿಗೆ ಮನೋರಂಜನೆ ನೀಡಿದರೆ ಯೋಧರು ತಮ್ಮ ಇಡೀ ಜೀವನವನ್ನೇ ದೇಶ ರಕ್ಷಣೆಗೆ ಮುಡುಪಾಗಿಡುತ್ತಾರೆ. ಇಂಥವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ನಟ ಶ್ರೀನಾಥ್ ಅಭಿಪ್ರಾಯಪಟ್ಟರು.  ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾಂಜಲಿ-2016ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯೋಧ ನಿರಂಜನ್ ಅವರು ಪಠಾಣ್ ಕೋಟ್‍ನಲ್ಲಿ ಬಾಂಬ್ ನಿಷ್ಕ್ರಿಯಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾಗ ವೇಳೆ ಹುತಾತ್ಮರಾದರು. ಎರಡು ಬಾಂಬ್‍ಗಳನ್ನು ಮೊದಲೇ ನಿಷ್ಕ್ರಿಯಗೊಳಿಸಿದ್ದರು. ಆದರೆ 3ನೇ ಬಾಂಬ್‍ನ್ನು ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟಗೊಂಡು ಅಸುನೀಗಿದರು ಎಂದು ಸ್ಮರಿಸಿದರು.

ಅವರ ನೆನಪಿಗಾಗಿ ಕೇರಳದಲ್ಲಿ ನಿರಂಜನ ಸ್ಮೃತಿ ಭವನವನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ ನಿರಂಜನ್ ಕುಮಾರ್ ಅವರ ನೆನಪಿನ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು. ಕಲೆ ಎಲ್ಲರಲೂ ಇರುತ್ತದೆ. ಆದರೆ ಅದನ್ನು ಗುರುತಿಸುವ ಕಣ್ಣು ಬೇಕು. ಪ್ರೊ ತ್ಸಾಹ ನೀಡುವ ಮನಸ್ಸು ಬೇಕು. ಕಲೆ ಎಂಬುದು ಪಾರಂಪರಿಕವಾಗಿ ನಮ್ಮ ದೇಶದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಕೊಡುಗೆಯಾಗಿ ಬರುತ್ತಿದೆ. ಇಂದಿನ ಆಧುನಿಕತೆಯೊಂದಿಗೆ ಮುಂದಿನ ಪೀಳಿಗೆಗೂ ಸಂಸ್ಕøತಿಯನ್ನು ಬಳುವಳಿಯಾಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಸಮಾರಂಭದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ, ವಿವಿ ನಿರ್ದೇಶಕ ಡಾ.ವೀರೇಶ್ ಕೆ.ಬಸಲಳ್ಳಿ , ಡಾ.ಚಂದ್ರಶೇಖರ್ ರಾಜು ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin