ದೇಶದಲ್ಲಿ ಸ್ಪೀಡ್ ಬ್ರೇಕರ್‍ನಿಂದ ಪ್ರತಿದಿನ 9 ಮಂದಿ ಸಾವು..!

Spread the love

Speed-Brekars

ನವದೆಹಲಿ, ಜೂ.19- ವಾಹನಗಳ ಅತಿವೇಗ ನಿಯಂತ್ರಿಸಲು ಸ್ಪೀಡ್ ಬ್ರೇಕರ್‍ಗಳು (ಹಂಪ್ಸ್) ಜೀವರಕ್ಷಣೆಗಿಂತ ಹೆಚ್ಚಾಗಿ ಪ್ರಾಣಗಳನ್ನು ಬಲಿ ಪಡೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸ್ಪೀಡ್‍ಬ್ರೇಕರ್‍ಗಳಿಂದಾಗಿ ದೇಶದಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಕನಿಷ್ಠ 9 ಮಂದಿ ಬಲಿಯಾಗುತ್ತಿದ್ದಾರೆ.   ಸ್ಪೀಡ್ ಬ್ರೇಕರ್‍ಗಳ ಪರಿಣಾಮ ಕಳೆದ ಎರಡು ವರ್ಷಗಳಿಂದ ಸಂಭವಿಸುತ್ತಿರುವ ಅಪಘಾತಗಳ ಮಾಹಿತಿ ದಾಖಲಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಆರಂಭಿಸಿದ್ದು, ಇದರ ಅಂಕಿ-ಅಂಶಗಳು ಈ ಆತಂಕಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಈ ಅಂಕಿ-ಅಂಶಗಳನ್ನು ಸರ್ಕಾರ ಅಕೃತವಾಗಿ ಬಿಡುಗಡೆ ಮಾಡಿಲ್ಲ.

ಸ್ಪೀಡ್ ಬ್ರೇಕರ್‍ಗಳು 2015ರಲ್ಲಿ 3,409 ಜೀವಗಳನ್ನು ಬಲಿ ತೆಗೆದುಕೊಂಡಿವೆ. ಇದು ಆಸ್ಪ್ರೇಲಿಯಾದಲ್ಲಿ ಒಂದು ವರ್ಷದ ಅವಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಗಿಂತಲೂ ಅಕ.   ಅವೈಜ್ಞಾನಿಕ ಸ್ಪೀಡ್ ಬ್ರೇಕರ್‍ಗಳ ನಿರ್ಮಾಣ, ದೋಷಪೂರಿತ ವಿನ್ಯಾಸ, ರಸ್ತೆ ಉಬ್ಬುಗಳ ನಿರ್ಮಾಣಕ್ಕಾಗಿ ಕಳಪೆ ವಸ್ತುಗಳ ಬಳಕೆ, ಸೀಡ್‍ಬ್ರೇಕ್‍ಗಳ ಬಗ್ಗೆ ಸೂಚನಾ ಫಲಕಗಳು ಇಲ್ಲದಿರುವುದು-ಇವೇ ಮೊದಲಾದ ದೋಷಗಳು ಇಂಥ ಅಪಘಾತಗಳು ಹಾಗೂ ಸಾವು-ನೋವುಗಳಿಗೆ ಪ್ರಮುಖ ಕಾರಣವಾಗಿವೆ.

ಈ ಸಮಸ್ಯೆ ದೇಶಾದ್ಯಂತ ಇದೆ. ನಮ್ಮ ದೇಶದಲ್ಲಿ ಬಹುತೇಕ ಎಲ್ಲ ರಸ್ತೆಗಳಲ್ಲೂ ಸ್ಪೀಡ್‍ಬ್ರೇಕರ್‍ಗಳಿವೆ. ಇಂಥ ಇಂಥ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಸವಾರರು ಮತ್ತು ವಾಹನಗಳಿಗೆ ಹಾನಿಯುಂಟು ಮಾಡುತ್ತವೆ ಎಂಬುದನ್ನು ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ ಒಪ್ಪಿಕೊಂಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಇಂಥ ಸ್ಪೀಡ್ ಬ್ರೇಕರ್‍ಗಳನ್ನು ನಿರ್ಮಾಣ ಮಾಡಲು ಸೂಕ್ತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin