ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ಸಂಭವ, ಕಟ್ಟೆಚ್ಚರ

High-Alert

ನವದೆಹಲಿ, ಜೂ.20- ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಸಿಟಿಗಳ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ದೆಹಲಿ ಪೊಲೀಸರು ದೇಶದ ಎಲ್ಲಾ ಭದ್ರತಾ ದಳಗಳಿಗೂ ಸೂಚನೆ ನೀಡಿದ್ದು, ಬಸ್ ನಿಲ್ದಾಣ, ರೈಲು, ಮೆಟ್ರೋ ನಿಲ್ದಾಣ, ಏರ್‍ಪೋರ್ಟ್, ಸ್ಟೇಡಿಯಂ, ಮಾಲ್, ಪ್ರವಾಸೀ ತಾಣಗಳ ಮೇಲೆ ಕಣ್ಣಿಡುವಂತೆ ತಿಳಿಸಲಾಗಿದೆ.

ಅಷ್ಟೇ ಅಲ್ಲದೆ, ಅಂತಾರಾಜ್ಯ ಗಡಿಗಳಲ್ಲಿ ತೆರಳುವ ವಾಹನಗನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡುವಂತೆ ಆದೇಶಿಸಲಾಗಿದೆ. ಭಯೋತ್ಪಾದಕರ ಗುರಿ ಕೇವಲ ದೆಹಲಿಯಷ್ಟೇ ಅಲ್ಲ, ಭಾರತದ ಇನ್ನುಳಿದ ಎಲ್ಲಾ ಪ್ರಮುಖ ನಗರಗಳ ಮೇಲೂ ಭಯೋತ್ಪಾದಕ ದಾಳಿ ನಡೆಯುವ ಸಂಭವವಿದೆ ಎಂಬ ಮಾಹಿತಿ ಲಂಬಿಸಿರುವ ಹಿನ್ನೆಲೆಯಲ್ಲಿ ಈ ಕಟ್ಟೆಚ್ಚರ ಘೋಷಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin