ದೇಶದ ವಿವಿಧ ಕ್ಷೇತ್ರಗಳನ್ನು ಉತ್ತುಂಗಕ್ಕೇರಿಸಲು ಟೆಕ್ ಇಂಡಿಯಾ ಯೋಜನೆ

Spread the love

Arun-Jetly-Badget

ನವದೆಹಲಿ, ಫೆ.1-ದೇಶದ ವಿವಿಧ ಕ್ಷೇತ್ರಗಳನ್ನು ಉತ್ತುಂಗಕ್ಕೇರಿಸಲು ಹಾಗೂ ಶಕ್ತಿಯುತ, ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ರೈತರು, ಮೂಲಸೌಕರ್ಯಾಭಿವೃದ್ದಿ, ಡಿಜಿಟಲ್ ಆರ್ಥಿಕತೆ ಮತ್ತು ತೆರಿಗೆ ವ್ಯವಸ್ಥೆಗಳೂ ಸೇರಿದಂತೆ 10 ಪ್ರಮುಖ ವಲಯಗಳ ಮೇಲೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಬೆಳಕು ಚೆಲ್ಲಲಾಗಿದೆ. ಈ ಯೋಜನೆಗೆ ಟೆಕ್ ಇಂಡಿಯಾ (ಟ್ರಾನ್ಸ್‍ಫರ್ಮ್-ಎನರ್ಜೈಸ್, ಕ್ಲೀನ್ ಇಂಡಿಯಾ) ಎಂದು ಹೆಸರಿಸಲಾಗಿದೆ.  ವಿತ್ತ ಸಚಿವ ಇಂದು ಮಂಡಿಸಿದ 2017-18ನೆ ಸಾಲಿನ ಮುಂಗಡ ಪತ್ರದಲ್ಲಿ ಗ್ರಾಮೀಣ ಭಾರತ, ಯುವಶಕ್ತಿ ಬಲವರ್ಧನೆ,ಬಡವರು ಮತ್ತು ಸೌಲಭ್ಯ ವಂಚಿತರ ಸಬಲೀಕರಣ, ಹಣಕಾಸು ವಲಯ, ಸಾರ್ವಜನಿಕ ಸೇವೆಗಳು ಮತ್ತು ಮಹತ್ವದ ಆರ್ಥಿಕ ನಿರ್ವಹಣೆಗೂ ಆದ್ಯತೆ ನೀಡಲಾಗಿದೆ.

ಆರ್ಥಿಕ ಚಟುವಟಿಕೆಗೆ ಪುಷ್ಟಿ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಸಚಿವ ಅರುಣ್ ಜೇಟ್ಲಿ, ಟೆಕ್ ಇಂಡಿಯಾ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.  ಮಹಾತ್ಮಗಾಂ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆಗಾಗಿ ಸಾಲ ಮೊತ್ತವನ್ನು 10 ಲಕ್ಷ ಕೋಟಿ ರೂ.ಗಳಿಂದ 48 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅರುಣ್ ಜೇಟ್ಲಿ ಪ್ರಕಟಿಸಿದರು.  20 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಹಣ ಸಂಚಯದೊಂದಿಗೆ ನಬಾರ್ಡ್ ಸ್ಥಾಪಿಸಲು ದೀರ್ಘಾವ ನೀರಾವರಿ ಯೋಜನಾ ನಿಯನ್ನು ಸಹ ಹಣಕಾಸು ಸಚಿವರು ಘೋಷಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin