ದೇಶದ ಹಿತಾಸಕ್ತಿಗಾಗಿ ಝಾಕಿರ್ನ IRF ಸಂಸ್ಥೆ ನಿಷೇಧ : ದೆಹಲಿ ಹೈಕೋರ್ಟ್ ಸಮರ್ಥನೆ
ನವದೆಹಲಿ, ಮಾ.16-ವಿವಾದಾತ್ಮಕ ಧರ್ಮ ಪ್ರಚಾರಕ ಝಾಕಿರ್ ನಾಯಕ್ಗೆ ಸೇರಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಆರ್ಎಎಫ್) ಸಂಸ್ಥೆಯನ್ನು ಭಾರತದ ಹಿತಾಸಕ್ತಿಗಾಗಿ ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ದೆಹಲಿ ಹೈಕೋರ್ಟ್ ಸಮರ್ಥಿಸಿಕೊಂಡಿದೆ. ಅಲ್ಲದೇ ಇದೇ ಕಾರಣಕ್ಕಾಗಿ ಪ್ರತಿಷ್ಠಾನ ನಿಷೇಧದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಾಯಕ್ಗೆ ಸೇರಿದ ಆರ್ಎಎಫ್ ನಿಷೇಧ ಕುರಿತು ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಪ್ರತಿಷ್ಠಾನ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ.
ಕೇಂದ್ರ ಸರ್ಕಾರದ ಆದೇಶವು ಕಾನೂನು ವಿರೋಧಿಯಲ್ಲ ಮತ್ತು ಅಕ್ರಮವಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಸಚ್ದೇವ ತಿಳಿಸಿದ್ದಾರೆ. ದೇಶದ ಸಾರ್ವಭೌಮತ್ವ, ಏಕತೆ ಮತ್ತು ರಾಷ್ಟ್ರೀಯ ಭದ್ರತೆ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ನ್ಯಾಯಾಧೀಶರು ಸಮರ್ಥಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >