ದೇಶ ಬೆಳಗುವ ಮಕ್ಕಳನ್ನು ರೂಪಿಸುವವಳು ತಾಯಿ : ಪುಷ್ಪಗಿರಿ ಶ್ರೀ

Spread the love

ckm

ಚಿಕ್ಕಮಗಳೂರು ಫೆ 3- ದೇಶವನ್ನು ಬೆಳಗುವ ಮಕ್ಕಳನ್ನು ರೂಪಿಸುವವಳು ಮೊದಲಿಗೆ ತಾಯಿ ಎಂದು ಪುಷ್ಪಗಿರಿ ಜಗದ್ಗುರು ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಗುರು ಸಿದ್ಧರಾಮೇಶ್ವರ ವಿದ್ಯಾ ಸಂಸ್ಥೆ ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತ ಮಕ್ಕಳಿಗೆ ಮೊದಲ ಹಂತದಲ್ಲಿ ತಾಯಿಯಿಂದ ಶಿಕ್ಷಣ ದೊರೆಯುತ್ತದೆ. ನಂತರ ಶಿಕ್ಷಕರು ಹೇಗೆ ಮಕ್ಕಳನ್ನು ರೂಪಿಸುತ್ತಾರೆ. ಹಾಗೆ ಮಗು ತನ್ನ ನಡತೆ ರೂಪಿಸಿಕೊಳ್ಳುತ್ತದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಅಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ, ಮಕ್ಕಳು ಶಿಕ್ಷಕರಿಗೆ ಗುರು ಹಿರಿಯರಿಗೆ ಗೌರವ ನೀಡಬೇಕು. ಅದೇ ರೀತಿಯ ಶಿಕ್ಷಕರುಗಳು ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡಬೇಕೆಂದರು. ಅದೇ ರೀತಿ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರರು, ಮಕ್ಕಳು ಇಷ್ಟಪಡುವಂತ ಶಿಕ್ಷಣ ನೀಡಬೇಕೆಂದರು.

ಮುಖ್ಯ ಅತಿಥಿಯಾಗಿ ಮಾತಾಡಿದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆಂಪನಗೌಡ ಅವರು, ಸಮಯ ಉಳಿತಾಯ ಮಾಡುವುದು ಎಲ್ಲರ ಕರ್ತವ್ಯ ಸಮಯಕ್ಕೆ ಸರಿಯಾಗಿ ವಿದ್ಯಾಭ್ಯಾಸ ಕ್ರಮ ರೂಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆ ಕಾರ್ಯಾಧ್ಯಕ್ಷ ಬಿ.ಆರ್.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕುಮಾರ ಕಳಾಸಪುರ ಬಹುಮಾನ ವಿತರಿಸಿದರು. ಎಸ್.ಎಸ್. ಚಂದ್ರಶೇಖರ್, ಶಾಲಾ ಮುಖ್ಯಶಿಕ್ಷಕ ಪೂರ್ಣೇಶ್, ಶಿಕ್ಷಕ ಲೋಹಿತ್ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin