ದೈಹಿಕ ಮಾನಸಿಕ ಚಿಕಿತ್ಸೆ ಬಹು ಪರಿಣಾಮಕಾರಿ : ಪ್ರಾಣ ಚೈತನ್ಯವೇ ಆರೋಗ್ಯದ ಗುಟ್ಟು

Spread the love

10

ಬೆಳಗಾವಿ,ಫೆ.11- ದೈಹಿಕ ಚಿಕಿತ್ಸೆಯ ಜತೆಜತೆಗೆ ಮಾನಸಿಕ ಚಿಕಿತ್ಸೆ ಬಹು ಪರಿಣಾಮಕಾರಿಯಾಗಿದ್ದು, ಯೋಗ ಮತ್ತು ಪ್ರಾಣಿಕ್ ಹಿಲೀಂಗ್‍ನಂಥಹ ಔಷಧಿ ರಹಿತ ಚಿಕಿತ್ಸೆಗಳು ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ ಎಂದು ಪ್ರಾಣಿಕ್ ಹಿಲೀಂಗ್ ತಜ್ಞ ವೈದ್ಯ ಟಿ. ವೆಂಕಟೇಶ ತಿಳಿಸಿದರು.ಯೋಗ ವಿದ್ಯಾ ಪ್ರಾಣಿಕ್ ಹಿಲೀಂಗ್ ಪೌಂಡೇಶನ್ ಕರ್ನಾಟಕ, ವಾರ್ತಾ ಇಲಾಖೆ ಹಾಗೂ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ವಾರ್ತಾಭವನದ ಸಭಾಂಗಣದಲ್ಲಿ ಪ್ರಾರಂಭವಾದ ಪ್ರಾಣಿಕ್ ಹಿಲೀಂಗ್ ತರಬೇತಿಯಲ್ಲಿ ಅವರು ಮಾತನಾಡಿದರು.
ವೈದ್ಯರು ದೇಹ ಎಂಬ ಎಂಜಿನ್ ಹಾರ್ಡ್‍ವೇರ್‍ಗೆ ಔಷಧಿಗಳ ಮೂಲಕ ಚಿಕಿತ್ಸೆ ಕೊಡುತ್ತಾರೆ. ಆದರೆ ಯೋಗ ಮತ್ತು ಪ್ರಾಣಿಕ್ ಹೀಲಿಂಗ್ ಮನುಷ್ಯ ಚೈತನ್ಯವಾದ ಪ್ರಾಣಕ್ಕೆ ಪ್ರಾಣ ಚೈತನ್ಯಗೊಳಿಸುವ ಸಾಫ್ಟವೇರ್ ಮೂಲಕ ಆರೋಗ್ಯ ನೀಡುತ್ತದೆ ಎಂದು ಅವರು ತಿಳಿಸಿದರು.

ಕಣ್ಣಿಗೆ ಕಾಣದ ಸುಪ್ತ ಶಕ್ತಿಯ ಬಳಕೆ ಮೂಲಕ ಸ್ಪರ್ಷಿಸದೇ, ಯಾವುದೇ ಔಷಧಿ ನೀಡದೆ ಯಾವುದೇ ರೋಗವನ್ನು ಗುಣಪಡಿಸುವ ಬಹುಪ್ರಾಚೀನ ವೈದ್ಯಕೀಯ ಪದ್ಧತಿಯೇ ಪ್ರಾಣಿಕ್ ಹೀಲಿಂಗ್ ಆಗಿದ್ದು, ಇದು ಮನುಷ್ಯಾತ್ಮನೊಳಗಿನ ಹೈ ಎನರ್ಜಿ ಬಳಸಿಕೊಳ್ಳುವ ಬಗ್ಗೆ ತಿಳಿಸುತ್ತದೆ ಎಂದರು.ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಪ್ರಾಣ ಚೈತನ್ಯ ನೀಡಿ ಹೊಸ ಚಿಕಿತ್ಸಾ ವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಸಲು ಈ ತರಬೇತಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮ ಇನ್ನೂ ನಾಲ್ಕು ದಿನ ನಡೆಯಲಿದ್ದು, ಮಾನಸಿಕ ಸಿದ್ಧಿ ಮೂಲಕ ಆರೋಗ್ಯ ಸುಧಾರಿಸಿಕೊಳ್ಳುವ ಬಗ್ಗೆ ಅಪಾರ ತಿಳಿವಳಿಕೆ ತರಬೇತಿ ನೀಡಿತು.ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರಗೇಶ ಶಿವಪೂಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಜೇಶ ವೈದ್ಯ, ಎಚ್.ವಿ. ನಾಗರಾಜ, ಚಂದ್ರಕಾಂತ ಸುಗಂಧಿ ಹಾಗೂ ಹಲವಾರು ಪತ್ರಕರ್ತರು ಸೇರಿದಂತೆ ಇತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin