ದೊಡ್ಡ ಆಡಿಯೋ ಸ್ಪೀಕರ್‍ನಲ್ಲಿಟ್ಟದ್ದ 10 ಚಿನ್ನದ ಬಿಸ್ಕತ್ ವಶ..!

Spread the love

gold-biscuit

ಬೆಂಗಳೂರು, ಏ.28– ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡುವ ಮತ್ತೊಂದು ಕುತಂತ್ರ ಪತ್ತೆಯಾಗಿದೆ. ಒಂದು ಕೆಜಿ ತೂಕದ 10 ಬಂಗಾರದ ಬಿಸ್ಕತ್ತುಗಳನ್ನು ದೊಡ್ಡ ಆಡಿಯೋ ಸ್ಪೀಕರ್‍ನಲ್ಲಿ ಅಡಗಿಸಿ ಕಳ್ಳಸಾಗಣೆ ಮಾಡುತ್ತಿದ್ದ ಚಾಲಕಿಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಸೌದಿ ಅರೇಬಿಯಾದ ರಿಯಾದ್‍ನ ಮೆಟಲ್ ಫ್ಯಾಬ್ರಿಕೇಷನ್ ಘಟಕವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮಹಮದ್ ರಫಿ ಶೇಖ್ (40) ಬಂಧಿತ ಆರೋಪಿ. ಬೆಂಗಳೂರು ಸೀಮಾಸುಂಕ ವಿಭಾಗದ ವಾಯು ಗುಪ್ತಚರ ಘಟಕದ (ಎಐಯು) ಅಧಿಕಾರಿಗಳು ಈತನಿಂದ 30 ಲಕ್ಷ ರೂ. ಮಾಲ್ಯದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಅತ್ಯಂತ ಬುದ್ದಿವಂತಿಕೆಯಿಂದ ಸ್ಪೀಕರ್‍ನ ವಾಯ್ಸ್ ಕಾಯಿಲ್‍ನಲ್ಲಿ ಬಂಗಾರದ ಗಟ್ಟಿಗಳನ್ನು ಮರೆಮಾಚಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.ಓಮನ್ ಏರ್ ವಿಮಾನ ಸಂಸ್ಥೆ ಮೂಲಕ ಮಸ್ಕಟ್‍ನಿಂದ ನಗರಕ್ಕೆ ಬಂದಿದ್ದ ಈತನನ್ನು ಅನುಮಾನದ ಮೇಲೆ ತಪಾಸಣೆಗೆ ಒಳಪಡಿಸಿದಾಗ ಸ್ಟೀಕರ್ ಬಾಕ್ಸ್ ಒಳಗೆ 10 ಗೋಲ್ಡ್ ಬಿಸ್ಕಟ್‍ಗಳು ಪತ್ತೆಯಾಗಿವೆ.

ಮತ್ತೊಂದು ಪ್ರಕರಣ :

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇನ್ನೊಬ್ಬ ಪ್ರಯಾಣಿಕನನ್ನು ಬಂಧಿಸಿದ ಏರ್ ಇಂಟಲಿಜೆನ್ಸ್ ಅಧಿಕಾರಿಗಳು, ಆತ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 9.17 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.   ದುಬೈನಿಂದ ಏರ್‍ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದ ಪ್ರಯಾಣಿಕನನ್ನು ತಪಾಸಣೆಗೆ ಒಳಪಡಿಸಿದಾಗ, ಆತನ ಬ್ಯಾಗ್‍ನಲ್ಲಿ ಅಲ್ಯೂಮಿನಿಯಂ ತಂತಿ ಸುರುಳಿ ಪತ್ತೆಯಾಯಿತು. ಅದನ್ನು ತೆರೆದು ನೋಡಿದಾಗ ಒಳಗಡೆ ಚಿನ್ನದ ಸುರುಳಿಗಳು ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin