ದ್ವಿಚಕ್ರ ಕದ್ದವನಿಗೆ ಜೈಲು
ಚಿಂತಾಮಣಿ, ಅ.28- ತಾಲೂಕಿನ ಸಂತೆಕಲ್ಲಹಳ್ಳಿ ಗ್ರಾಮದ ರವಿಶಂಕರ್ ಎಂಬವರ ಮನೆ ಬಳಿ ಕಳೆದ 22ಅಕ್ಟೋಬರ್ 2015 ರಂದು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ ಆರೋಪಿಗೆ ಒಂದು ವರ್ಷ ಜೈಲು ಹಾಗೂ ಐದು ಸಾವಿರ ದಂಡ ವಿಧಿಸಿ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಕೋಲಾರ ತಾಲೂಕಿನ ಕಾಡಹಳ್ಳಿ ನಿವಾಸಿ ಆನಂದ್ ಶಿಕ್ಷೆಗೆ ಒಳಗಾಗಿ ರುವ ಆರೋಪಿಯಾಗಿದ್ದು ಸರಕಾರಿ ಅಭಿಯೋಜಕ ಗುರುಸ್ವಾಮಿ ವಾದ ಮಂಡಿಸಿದ್ದರು.